Breaking News :

ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಟ್ವಿಸ್ಟ್ : SIT ಎದುರು ಸತ್ಯ ಬಾಯಿಬಿಟ್ಟ ಅನಾಮಿಕ…! ಮಾಸ್ಕ್ ಮ್ಯಾನ್ ಹೇಳಿದ್ದೇನು ಗೊತ್ತಾ…? ಇಲ್ಲಿದೆ ನೋಡಿ ಮಾಹಿತಿ. 

 

 

ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಟ್ವಿಸ್ಟ್ : SIT ಎದುರು ಸತ್ಯ ಬಾಯಿಬಿಟ್ಟ ಅನಾಮಿಕ…! ಮಾಸ್ಕ್ ಮ್ಯಾನ್ ಹೇಳಿದ್ದೇನು ಗೊತ್ತಾ…? ಇಲ್ಲಿದೆ ನೋಡಿ ಮಾಹಿತಿ.


ಧರ್ಮಸ್ಥಳ: ರಾಜ್ಯ ಹಾಗೂ ದೇಶಾದ್ಯಂತ ತೀವ್ರ ಚರ್ಚೆ ಹಾಗೂ ಕುತೂಹಲಕ್ಕೆ ಕಾರಣವಾಗಿದ್ದ ಧರ್ಮಸ್ಥಳ ‘ಬುರುಡೆ’ ಪ್ರಕರಣಕ್ಕೆ ಇದೀಗ ತಿರುವು ಸಿಕ್ಕಿದೆ.

ನೇತ್ರಾವತಿ ನದಿ ದಡದಲ್ಲಿ ಮಹಿಳೆಯರು, ಯುವತಿಯರು ಸೇರಿದಂತೆ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಹೇಳಿ ಕಳೆದ 15 ದಿನಗಳಿಂದ ಶೋಧ ಕಾರ್ಯಕ್ಕೆ ಕಾರಣನಾಗಿದ್ದ ಸಾಕ್ಷಿದಾರ ಎಸ್ ಟಿಐ ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ಒತ್ತಡದಿಂದ ಸುಳ್ಳು ಹೇಳಿದೆ ಎಂದು ಎಸ್‌ಐಟಿ ಮುಂದೆ ಒಪ್ಪಿಕೊಂಡ ಅನಾಮಿಕ ವ್ಯಕ್ತಿ ಧರ್ಮಸ್ಥಳ ಬುರುಡೆ ರಹಸ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ತರ ಬೆಳವಣಿಗೆಯೊಂದು ಆಗಿದ್ದು, ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (SIT) ಎದುರು ಅನಾಮಿಕ ವ್ಯಕ್ತಿ ತಪ್ಪೊಪ್ಪಿಕೊಂಡಿದ್ದಾನೆ. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆಯಲ್ಲಿ ಅನೇಕ ರೀತಿಯ ಬೆಳವಣಿಗೆ ಆಗುತ್ತಿದೆ.

ತಾನು ಒತ್ತಡಕ್ಕೆ ಒಳಗಾಗಿ ಸುಳ್ಳು ಹೇಳಿಕೆ ನೀಡಿರುವುದಾಗಿ ಹೇಳಿದ್ದಾನೆ. ಕಾನೂನು ಪ್ರಕಾರವೇ ಹೆಣ ಹೂತಿದ್ದರೂ, ಕಾನೂನು ಉಲ್ಲಂಘಿಸಿ ಹೂತಿದ್ದಾಗಿ ಹೇಳುವಂತೆ ಮೂವರು 2023ರಲ್ಲಿ ತಮಿಳುನಾಡಿನಿಂದ ಕರೆದುಕೊಂಡು ಬಂದಿದ್ದ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಮುಸುಕುಧಾರಿ ವ್ಯಕ್ತಿಯ ಈ ಹೇಳಿಕೆಯು ಧರ್ಮಸ್ಥಳ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ಎಸ್‌ಐಟಿ ಆತನ ಸಂಪೂರ್ಣ ವಿಡಿಯೋ ಹೇಳಿಕೆಯನ್ನು ದಾಖಲಿಸಿಕೊಂಡಿದೆ.

ಮಾಸ್ಕ್ ಮೆನ್ ಹೇಳಿದ್ದೇನು..?

ಇನ್ನು ಪೊಲೀಸರ ಮುಂದೆ ಆತ ಕೊಟ್ಟಿರುವ ಹೇಳಿಕೆಯ ಪ್ರಕಾರ 2014 ರಲ್ಲಿ ನಾನು ಧರ್ಮಸ್ಥಳದಿಂದ ಹೋಗಿ ತಮಿಳುನಾಡಿನಲ್ಲಿ ವಾಸವಿದ್ದೆ ಎಂದು ಹೇಳಿಕೆ ನೀಡಿದ್ದಾನೆ. ಇದಲ್ಲದೇ, ಇನ್ನೂ ಅನೇಕ ವಿಚಾರಗಳನ್ನ ಹೇಳಿದ್ದು, ಆ ಬಗ್ಗೆ ಮಾಹಿತಿ ಇಲ್ಲಿದೆ.

2023ರಲ್ಲಿ ಕೆಲವು ಜನರ ತಂಡ ನನ್ನನ್ನ ಸಂಪರ್ಕ ಮಾಡಿತ್ತು. ಆಗ ನಾನು ಕಾನೂನು ಪ್ರಕಾರ ಶವಗಳನ್ನ ಹೂತು ಹಾಕಿದ್ದೇನೆ ಎಂದು ಸಹ ಹೇಳಿದ್ದೆ. ಆದರೆ ನನಗೆ ಅವರು ಪೊಲೀಸರ ಮುಂದೆ ಶರಣಾಗುವಂತೆ ಒತ್ತಡ ಹಾಕಿದರು. ಹಾಗಾಗಿ ಬುರುಡೆ ಕೊಟ್ಟು ಅವರು ಹೇಳಿದಂತೆ ಮಾಡಿದೆ ಎಂದು ಅನಾಮಿಕ ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ. ಇದಲ್ಲದೇ, ನನಗೆ ಮೂರು ಜನರು ಪೊಲೀಸರ ಮುಂದೆ ಏನು ಹೇಳಬೇಕು ಎಂದು ಹೇಳಿಕೊಟ್ಟಿದ್ದರು.ಅವರು ಒತ್ತಡ ಹಾಕಿದ್ದರಿಂದ ನಾನು ಸುಳ್ಳು ಹೇಳಿದೆ ಎಂದು ಮಾಸ್ಕ್ ಮ್ಯಾನ್ SIT ಅಧಿಕಾರಿಗಳ ಮುಂದೆ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ.

ಮೊದಲು ನನಗೆ ಬಹಳ ಭಯವಾಯಿತು. ಆದರೆ ಯಾವಾಗ ಸುಜಾತ ಭಟ್‌ ದೂರು ಕೊಟ್ಟರು ಆಗ ನನಗೆ ಧೈರ್ಯ ಬಂದಿದು ಎಂದು ಹೇಳಿಕೊಂಡಿದಾನಂತೆ ಅನಾಮಿಕ.

ತನಿಖೆಯ ಸಾಕ್ಷ್ಯ : ಇನ್ನು ವಿಚಾರಣೆಯಲ್ಲಿ ಅನಾಮಿಕ ವ್ಯಕ್ತಿಯನ್ನ ಎಸ್‌ಐಟಿ ಅಧಿಕಾರಿಗಳು ಬುರುಡೆಯನ್ನ ಎಲ್ಲಿಂದ ತಂದಿದ್ದು ಎಂದು ಕೇಳಿದ್ದಕ್ಕೆ ಯಾವುದೇ ರೀತಿಯಾಗಿ ಸರಿಯಾದ ಉತ್ತರ ಕೊಟ್ಟಿಲ್ಲ ಎನ್ನಲಾಗುತ್ತಿದೆ. ಅನಾಮಿಕ ತಾನು ಶವಗಳನ್ನು ಹೂತಿದ್ದೆ 16ಕ್ಕೂ ಹೆಚ್ಚು ಸ್ಥಳಗಳನ್ನು ತೋರಿಸಿದ್ದಾನೆ, ಆದರೆ ಕೇವಲ ಎರಡು ಸ್ಥಳಗಳಲ್ಲಿ ಮಾತ್ರ ಮೂಳೆಗಳು ಸಿಕ್ಕಿವೆ. ಮಹಿಳೆಯರ ಅಸ್ತಿಪಂಜರಗಳು ಯಾವುದೇ ಸ್ಥಳದಲ್ಲಿ ದೊರೆತಿಲ್ಲ. ಆತ ತಂದ ಬುರುಡೆಯು ಪುರುಷನದ್ದು ಎಂದು ಎಫ್‌ಎಸ್‌ಎಲ್ ವರದಿ ದೃಢಪಡಿಸಿದೆ. ಆದರೆ, ಬುರುಡೆಯ ಮೂಲದ ಬಗ್ಗೆ ಆತ ಸ್ಪಷ್ಟ ಉತ್ತರ ನೀಡಿಲ್ಲ, ಬಂಗ್ಲೆಗುಡ್ಡ, ಬೋಳಿಯಾರು, ಕಾಡು ಎಂದು ವಿವಿಧ ಸ್ಥಳಗಳನ್ನು ಉಲ್ಲೇಖಿಸಿದ್ದಾನೆ.

 

 

 

 

Share this article

ಟಾಪ್ ನ್ಯೂಸ್

More News