ನಾವು ಅನುಭವಿಸುತ್ತಿರುವ ಸ್ವಾಂತಂತ್ರ್ಯ ನಮ್ಮ ಪೂರ್ವಿಕರ ಕೊಡುಗೆ : ಚಂಗಪ್ಪ
ಸಿದ್ದಾಪುರ : ನಮ್ಮ ಪೂರ್ವಿಕರು ಹೋರಾಟ ಪ್ರಾಣ ತ್ಯಾಗ ಮಾಡಿ ನಮಗೆ ಕೊಡುಗೆಯಾಗಿ ನೀಡಿರುವ ಸ್ವಾತಂತ್ರ್ಯವನ್ನು ನಾವು ಇಂದು ಅನುಭವಿಸುತ್ತಿದ್ದೇವೆ ಎಂಬುವುದನ್ನು ಯಾರೂ ಮರೆಯುವಂತಿಲ್ಲ ಎಂದು ಆನಂದಪುರ ಎಸ್ಟೇಟಿನ ಡೆಪ್ಯೂಟಿ ಮೆನೇಜರ್ ಚಂಗಪ್ಪ ಅಭಿಪ್ರಾಯಪಟ್ಟಿದ್ದಾರೆ.
ಟಾಟಾ ಕಾಫಿ ಸಂಸ್ಥೆಗೆ ಸೇರಿದ ಆನಂದಪುರ ಎಸ್ಟೇಟಿನ ಪಳ್ಳಕೆರೆ ವಿಭಾಗದಲ್ಲಿ ಏರ್ಪಡಿಸಿದ್ದ 79ನೇಯ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಫೀಲ್ಡ್ ಆಫೀಸರ್ ಪ್ರದೀಪ್, ತೋಟದ ಸಿಬ್ಬಂದಿಗಳು, ಕಾರ್ಮಿಕರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.
ಕಾರ್ಯಕ್ರಮಕ್ಕೆ ದೇಶ ಪ್ರೇಮವನ್ನು ಬಿಂಬಿಸುವ ವಿಶೇಷ ವಸ್ತ್ರ ಧರಿಸಿ ಬಂದಿದ್ದ ಮಕ್ಕಳು ಗಮನ ಸೆಳೆದರು.








