ನೆಲ್ಯಹುದಿಕೇರಿಯಲ್ಲಿ ಡಿ ವೈ ಎಫ್ ಐ ಜಿಲ್ಲಾ ಸಮಾವೇಶ : ಯುವ ಸಮೂಹಕ್ಕೆ ಉದ್ಯೋಗ ಸೃಷ್ಟಿಸದ ಸರ್ಕಾರಗಳ ವಿರುದ್ಧ ಆಕ್ರೋಶ
ಮಡಿಕೇರಿ :- ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 78 ವರ್ಷ ಕಳೆದರೂ ಇಂದಿಗೂ ನಿರುದ್ಯೋಗ ಸಮಸ್ಯೆಯಿಂದ ಯುವ ಸಮೂಹ ಅತಂತ್ರ ಸ್ಥಿತಿಯಲ್ಲಿ ದಿನಕಳೆಯಬೇಕಾದ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದ್ದು
ಉದ್ಯೋಗ ಸೃಷ್ಟಿಸಬೇಕಾದ ಸರ್ಕಾರಗಳು ಮೌನವಾಗಿರುವ ಹಿನ್ನೆಲೆ ಯುವ ಸಮೂಹವನ್ನು ನಂಬಿರುವ ಕುಟುಂಬಗಳು ಸಂಕಷ್ಟದ ಜೀವನ ನಡೆಸುವಂತಾಗಿದೆ ಎಂದು ಭಾರತ ಪ್ರಜಾ ಸತ್ತಾತ್ಮಕ ಯುವಜನ ಫೆಡರೇಶನ್ ( ಡಿ ವೈ ಎಫ್ ಐ) ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ್ ಪೂಜಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೆಲ್ಯಹುದಿಕೇರಿ ವಿ ಎಸ್ ಎಸ್ ಎನ್ ಸಭಾಂಗಣದಲ್ಲಿ ನಡೆದ ಡಿವೈಎಫ್ ಐ ಜಿಲ್ಲಾ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿ ರಾಜ್ಯದ ವಿವಿಧ ಇಲಾಖೆಗಳಲ್ಲಿ ಸಾವಿರಾರು ಉದ್ಯೋಗಗಳು ಖಾಲಿ ಇದ್ದರೂ ಉದ್ಯೋಗ ಭರ್ತಿ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ.
ಕೊಡಗು ಜಿಲ್ಲೆಯ ಬಹುತೇಕ ಇಲಾಖೆಗಳಲ್ಲಿ ಉದ್ಯೋಗ ಬರ್ತಿಯಾಗದೆ ಖಾಲಿ ಇದ್ದು ಸಾರ್ವಜನಿಕ ಸೇವೆಗಳು ನಿಭಾಯಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಜನಪ್ರತಿನಿಧಿಗಳು ಅಧಿಕಾರಿಗಳು ಉದ್ಯೋಗ ಬರ್ತಿಗೆ ಮುಂದಾಗದೆ ಇರುವುದರಿಂದ ಉನ್ನತ ಶಿಕ್ಷಣ ಪಡೆದ ಯುವ ಸಮೂಹ ಕಾಫಿ ತೋಟ ಕೆಲಸಕ್ಕೆ ತೆರಳುವಂತಾಗಿದೆ.
ಪ್ರವಾಸಿ ತಾಣಗಳ ಮೂಲಕ ಹೆಸರುವಾಸಿಯಾಗಿರುವ ಕೊಡಗು ಜಿಲ್ಲೆಯಲ್ಲಿ ನಿರುದ್ಯೋಗಿಗಳಿಗೆ ಸೂಕ್ತ ಕೆಲಸಗಳು ಸಿಗದೇ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ ಸ್ಥಳೀಯರಿಗೆ ಉದ್ಯೋಗ ಸೃಷ್ಟಿ ಮಾಡಿ ಪ್ರವಾಸೋದ್ಯಮವನ್ನು ಬೆಳೆಸಿದ್ದಲ್ಲಿ ವ್ಯಾಪಾರ ವಹಿವಾಟಿನೊಂದಿಗೆ ಮತ್ತಷ್ಟು ಅಭಿವೃದ್ಧಿ ಕಾಣಲಿದೆ ಜನಪ್ರತಿನಿಧಿಗಳು ಯುವಸಮಹಕ್ಕೆ ಉದ್ಯೋಗ ಸೃಷ್ಟಿಸಲು ಮುಂದಾಗ ಬೇಕೆಂದು ಹೇಳಿದರು.
ಡಿವೈಎಫ್ ಐ ರಾಜ್ಯ ಸಮಿತಿ ಖಜಾಂಜಿ ಸಂತೋಷ್ ಬಜಾಲ್ ಮಾತನಾಡಿ ಡಿ ವೈ ಎಫ್ ಐ ಸಂಘಟನೆ ಕಳೆದ ಹಲವಾರು ವರ್ಷಗಳಿಂದಲೂ ಲಕ್ಷಾಂತರ ಯುವ ಸಮೂಹವನ ಒಗ್ಗೂಡಿಸಿ ಸಂಘಟನಾತ್ಮಕವಾಗಿ ಮುನ್ನಡೆಯುತ್ತಿದೆ ಯುವಜನರ ಸಮಸ್ಯೆ ಹಾಗೂ ಏಳಿಗೆಗಾಗಿ ಶ್ರಮಿಸುವ ಮೂಲಕ
ಯುವಜನರ ಸರ್ವಾಂಗೀಣ ಅಭಿವೃದ್ಧಿಗೆ ಹೋರಾಡಲು, ಸಮಾನತೆ, ಪ್ರಜಾಪ್ರಭುತ್ವ, ಪ್ರಗತಿಪರ ಮೌಲ್ಯಗಳ ರಕ್ಷಣೆ ಸಮಾನ ಮನಸ್ಕರೊಂದಿಗೆ ಸ್ನೇಹ-ಸೌಹಾರ್ದ – ನವ ಸಮಾಜದ ನಿರ್ಮಾಣಕ್ಕೆ ಬದ್ಧತೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚಿಸಲಾಗಿದೆ ಇದರೊಂದಿಗೆ ಹಲವು ಬೇಡಿಕೆಗಳನ್ನ ಮುಂದಿಟ್ಟು ಉದ್ಯೋಗ ಕೋಡಿ ಇಲ್ಲವೇ ನಿರುದ್ಯೋಗ ಭತ್ಯೆ ಕೊಡಿ, ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿ, ನೇಮಕಾತಿ ಮೇಲಿನ ನಿರ್ಬಂಧ ಹಿಂತೆಗೆಯಬೇಕು, ಖಾಸಗಿ ರಂಗದಲ್ಲಿ ಮೀಸಲಾತಿ ಜಾರಿಗೆ ತನ್ನಿ, ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವವರಿಗೆ ಕನಿಷ್ಟ ವೇತನ ನಿಗದಿಗೊಳಿಸಿ, MNREGAದಲ್ಲಿನ ಭ್ರಷ್ಟಾಚಾರ ತಡೆಗಟ್ಟಿ ಶಿಕ್ಷಣದ ವ್ಯಾಪಾರ ತಡೆಗಟ್ಟಿ, ಸರ್ವರಿಗೂ ಶಿಕ್ಷಣ ಕಡ್ಡಾಯವಾಗೊಳಿಸಿ, ವಸತಿ, ನಿವೇಶನ, ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸಾರ್ವತ್ರೀಕರಣಗೊಳಿಸಿ. ಜಾತೀಯತೆ – ಅಸ್ಪೃಶ್ಯತೆ – ಅನಕ್ಷರತೆ – ಮೌಡ್ಯತೆ -ಅಜ್ಞಾನಗಳನ್ನು ತೊಲಗಿಸಿ. ▸ ಉದ್ಯೋಗ, ಶಿಕ್ಷಣ, ಆರೋಗ್ಯ ಮೂಲಭೂತ ಹಕ್ಕಾಗಲಿ. ಉದ್ಯೋಗ ಸೃಷ್ಟಿಸಿ, ಸ್ಥಳೀಯರಿಗೆ ಆದ್ಯತೆ ನೀಡಲೇಬೇಕೆಂದು ಒತ್ತಾಯಿಸಿದರು .
ಇದೇ ಸಂದರ್ಭ ನೂತನ ಜಿಲ್ಲಾ ಸಮಿತಿಯನ್ನ ರಚಿಸಲಾಗಿ
ಅಧ್ಯಕ್ಷರಾಗಿ ರಾಚಪ್ಪಜಿ ಉಪಾಧ್ಯಕ್ಷರು ಗಳಾಗಿ ಕುಮಾರಿ ವಿದ್ಯಾ, ಎಂ ಕೆ ಅನಿಲ್, ಕಾರ್ಯದರ್ಶಿಗಳಾಗಿ ಜ್ಯೋತಿ ಕೃಷ್ಣ, ರಮೇಶ್, ಕವನ್ ಕುಮಾರ್, ಖಜಾಂಜಿಯಾಗಿ ಸಾಧಿಕ್ ಸೇರಿದಂತೆ ಹಲವರನ್ನು ಜಿಲ್ಲಾ ಸಮಿತಿ ಸದಸ್ಯರುಗಳಾಗಿ ಆಯ್ಕೆ ಮಾಡಲಾಯಿತು.
ಮಾಜಿ ಡಿ ವೈ ಎಫ್ ಐ ಜಿಲ್ಲಾಧ್ಯಕ್ಷ ಪಿ ಆರ್ ಭರತ್, ಮಹಿಳಾ ಸಂಘಟನೆಯ ಪದ್ಮ ಶ್ರೀಧರ್, ರೈತ ಸಂಘಟನೆಯ ಪ್ರಮುಖ ಟಿಟಿ ಉದಯ, ಕೆ ಎಸ್ ಮೋನಪ್ಪ ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ ಡಿ ವೈ ಸಂಘಟನೆಯ ನೂರಾರು ಸದಸ್ಯರುಗಳು ಪಾಲ್ಗೊಂಡಿದ್ದರು.








