ಪದವಿ ಫಲಿತಾಂಶದಲ್ಲಿ ಸಂಶುಲ್ ಉಲಮ ಕಾಲೇಜು ವಿದ್ಯಾರ್ಥಿಗಳ ಸಾಧನೆ
ವಿರಾಜಪೇಟೆ : ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟ ವಿರಾಜಪೇಟೆ ತಾಲ್ಲೂಕಿನ ಪೇರುಂಬಾಡಿಯ ಸಂಸಲ್ ಉಲಮ ಎಜುಕೇಶನಲ್ ಅಕಾಡೆಮಿಯ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿ.ಕಾಂ ವಿಭಾಗದಲ್ಲಿ ಶೇ100ರ ಫಲಿತಾಂಶ ಪಡೆದು ನಾಲ್ವರು ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ
2024- 25 ನೇ ಸಾಲಿನ ಫಲಿತಾಂಶದಲ್ಲಿ ಅಂತಿಮ ಬಿ.ಕಾಂ ವಿಭಾಗದಲ್ಲಿ ವಿದ್ಯಾರ್ಥಿನಿ ಜಸೀಲ ಎಂ. ಕೆ. ಶೇ 93ರಷ್ಟು ಅಂಕ ಗಳಿಸಿ ಪ್ರಥಮ ಸ್ಥಾನ, ನೇಹಾ ಶೇ 90ರಷ್ಟು ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನ, ಹಾಗೂ ತಸ್ಲೀಮ ಎಲ್. ಹೆಚ್.ಶೇ 80ರಷ್ಟು ಅಂಕ ಗಳಿಸಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಕಳೆದ ಹಲವು ವರ್ಷಗಳಿಂದಲೂ ಕಾಲೇಜು ವಿದ್ಯಾರ್ಥಿಗಳು ಶೈಕ್ಷಣಿಕ ಸಾಲಿನಲ್ಲಿ ಶೇ100ರ ಫಲಿತಾಂಶದೊಂದಿಗೆ ಸಾಧನೆ ಮಾಡಿದ್ದಾರೆ ಎಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಬಶೀರ್ ಹಾಜಿ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಭಾನುಮತಿ ತಿಳಿಸಿದ್ದಾರೆ.








