ಪೋಟೋದಲ್ಲಿರುವ ವ್ಯಕ್ತಿ ಕಂಡುಬಂದಲ್ಲಿ ಮಾಹಿತಿ ನೀಡಿ
ವಿರಾಜಪೇಟೆ : ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿನ ಪ್ರಕರಣವೊಂದಕ್ಕೆ ಸಂಬಂಧಿಸಿದ ಈ ವ್ಯಕ್ತಿಯ ಬಗ್ಗೆ ಮಾಹಿತಿ ಇದ್ದಲ್ಲಿ ವಿರಾಜಪೇಟೆ ಗ್ರಾಮಾಂತರ ಠಾಣೆಗೆ ತಿಳಿಸಲು ಕೋರಲಾಗಿದೆ.
ಆರೋಪಿಯ ಹೆಸರು ದಿನೇಶ್. ತಂದೆ ಲೇಟ್ ರಾಜು 28 ವರ್ಷ ಕೂಲಿ ಕಾರ್ಮಿಕ. ಜೇನು ಕುರುಬ ಜಾತಿಗೆ ಸೇರಿದ ಈತನ ಸ್ವಂತ ಊರು ಕುಟ್ಟ ವ್ಯಾಪ್ತಿಯ ನಾಣಚಿ. ಈತ ಈ ಹಿಂದೆ ಅಮ್ಮತಿಯ ಸುವಿನ್ ಗಣಪತಿ ಅವರ ಲೈನ್ ಮನೆಯಲ್ಲಿ ವಾಸವಿದ್ದ, ಈತನ ಚಹರೆಯು ಕೆಳಕಂಡಂತಿರುತ್ತದೆ.
ಕಪ್ಪು ಮೈಬಣ್ಣ. ಕುರುಚಲ ಗಡ್ಡ ಗುಂಗುರು ತಲೆ ಕೂದಲು. ಅಂದಾಜು 5.1 ಅಡಿ ಎತ್ತರವಿರುತ್ತದೆ. ಸಾಮಾನ್ಯವಾಗಿ ತಲೆಗೆ ಉಲ್ಲನ್ ಕ್ಯಾಪ್ ಧರಿಸುತ್ತಾನೆ . ಮತ್ತು ಸಾಮಾನ್ಯವಾಗಿ ಜೀನ್ಸ್ ಚಡ್ಡಿ ಧರಿಸುತ್ತಾನೆ. ಈತನು ಕುಟ್ಟ ಶ್ರೀಮಂಗಲ ವ್ಯಾಪ್ತಿಯಲ್ಲಿ ಇರುವ ಬಗ್ಗೆ ಮಾಹಿತಿ ಇದೆ. ಯಾರಿಗಾದರೂ ಈತನ ಬಗ್ಗೆ ಮಾಹಿತಿ ಸಿಕ್ಕಿದ್ದಲ್ಲಿ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ತಿಳಿಸುವಂತೆ ಕೋರಲಾಗಿದೆ ಅಥವಾ ಕುಟ್ಟ ವ್ಯಾಪ್ತಿಯ ಬೀಟ್ ಗ್ರೂಪಿಗೆ ಪ್ರಕಟಿಸಲು ಕೋರಲಾಗಿದೆ.








