Breaking News :

ಪ್ರಧಾನಿ ಅವಹೇಳನ : ಆರೋಪಿಗಳು ಮಡಿಕೇರಿ ಬಿಜೆಪಿ ಮುಖಂಡರ ಚೇಲಾಗಳು ಕೊಡಗು ಕಾಂಗ್ರೆಸ್ ಆರೋಪ


ಜನವಾಹಿನಿ News ಮಡಿಕೇರಿ : ದೇಶದ ಪ್ರಧಾನ ಮಂತ್ರಿಗಳನ್ನು ಅಪಮಾನಿಸಿ ಬಂಧಿತರಾಗಿರುವ ಕಿಡಿಗೇಡಿ ಆರೋಪಿಗಳು ಮಡಿಕೇರಿ ನಗರ ಬಿಜೆಪಿ ಮುಖಂಡರ ಚೇಲಾಗಳಾಗಿದ್ದಾರೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಗಂಭೀರ ಆರೋಪ ಮಾಡಿದ್ದಾರೆ.

ಸಂವಿಧಾನ ಬದ್ದ ಹುದ್ದೆಯಲ್ಲಿ ಪರಮ್ಮೋಚ್ಛ ಸ್ಥಾನದಲ್ಲಿರುವ ದೇಶದ ಪ್ರಧಾನ ಮಂತ್ರಿಗಳನ್ನು ಮಡಿಕೇರಿಯ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಅನಧಿಕೃತ ಮಳಿಗೆಗಳನ್ನು ಮಡಿಕೇರಿ ಬಿಜೆಪಿ ಮುಖಂಡರ ಬಹಿರಂಗ ಕುಮ್ಮಕ್ಕಿನಿಂದ ನಡೆಸುತ್ತಿರುವ ವ್ಯಕ್ತಿಯ ಸಿಬ್ಬಂದಿಗಳು ಅತ್ಯಂತ ಕೀಳಾಗಿ ನಿಂದಿಸಿ ವಿಡಿಯೋ ಹರಿಯಬಿಟ್ಟಿದ್ದು ಈ ಹಿನ್ನಲೆಯಲ್ಲಿ ಮಡಿಕೇರಿ ನಗರ ಪೋಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ಷಿಪ್ರಗತಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಸದರಿ ಆರೋಪಿಗಳು ಮಡಿಕೇರಿ ಬಿಜೆಪಿ ಮುಖಂಡರ ಚೇಲಾಗಳಾಗಿದ್ದು ಅವರ ಕೃಪಾಕಟಾಕ್ಷದಿಂದಲೇ ಇಂತಹ ದುಷ್ಕೃತ್ಯ ಎಸಗಿದ್ದಾರೆ. ಹಾಗಾಗಿ ಕೊಡಗು ಬಿಜೆಪಿ ಸಾರ್ವಜನಿಕವಾಗಿ ಜನರ ಕ್ಷಮೆಯಾಚಿಸಲಿ ಎಂದು ತೆನ್ನಿರ ಮೈನಾ ಆಗ್ರಹಿಸಿದ್ದಾರೆ.

ಸದರಿ ಅಕ್ರಮ ಮಳಿಗೆ ಮಾಲಿಕನ( ಜುಬೇರ್) ಅಕ್ರಮ ಮಳಿಗೆಗಳನ್ನು ತೆರವುಗೊಳಿಸಲು ನಗರ ಸಭೆ ಸೂಚನೆ ನೀಡಿದ್ದರೂ ಬಿಜೆಪಿ ಪಕ್ಷದ ಕೆಲವು ನಗರ ಸಭಾ ಸದಸ್ಯರು ಅಕ್ರಮ ಮಳಿಗೆಯ ಪರ ನಿಂತು ನಗರ ಸಭೆ ಸಾಮಾನ್ಯ ಸಭೆಯಲ್ಲಿ ತಾವು ವಾಮಮಾರ್ಗಿಗಳು ಎಂಬುದನ್ನು ಪ್ರದರ್ಶನ ಮಾಡಿದ್ದರು.ಇಂತಹ ನೀತಿಗೆಟ್ಟ ಬಿಜೆಪಿ ನಾಯಕರು ತಮ್ಮ ಚೇಲಾಗಳಿಗೆ ಅಪರಾಧ ಎಸಗಲು ಪರೋಕ್ಷವಾಗಿ ಕುಮ್ಮಕ್ಕು ನೀಡಿರುವ ಸಾಧ್ಯತೆ ಇದ್ದು ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಲಾಗುವುದು ಎಂದು ತೆನ್ನಿರ ಮೈನಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Share this article

ಟಾಪ್ ನ್ಯೂಸ್

More News