ಜನವಾಹಿನಿ NEWS ಸಿದ್ದಾಪುರ : ನ್ಯಾಶನಲ್ ಯೂತ್ ಅವಾರ್ಡ್ಸ್ ಪ್ರಶಸ್ತಿ ವಿಜೇತರಾದ ನಿಫಾ ಇಂಡಿಯಾ ತನ್ನ ಸಿಲ್ವರ್ ಜ್ಯೂಬಿಲಿ ಅಂಗವಾಗಿ ನವದೆಹಲಿಯಲ್ಲಿ ರಾಷ್ಟ್ರಮಟ್ಟದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಏಕತಾ ರಾಲಿಯಲ್ಲಿ ಕರ್ನಾಟಕದ ಕೊಡಗು ಜಿಲ್ಲೆಯ ಸಿದ್ದಾಪುರದ ಪ್ರವೀಣ್ ಸಾಮಾಜಿಕ ಕಾರ್ಯಕರ್ತ ಪ್ರಶಸ್ತಿಗೆ ಭಾಜನರಾಗಿ ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿ ಜಿಲ್ಲೆಗೆ ಕೀರ್ತಿಯನ್ನು ತಂದ ಪ್ರವೀಣ್ ದೆಹಲಿಯಿಂದ ತನ್ನ ಹುಟ್ಟೂರಾದ ಸಿದ್ಧಾಪುರ ನಗರಕ್ಕೆ ಬಂದ ಸಂದರ್ಭ ಚೆಂಡ ಮೇಳದೊಂದಿಗೆ ಬರಮಾಡಿಕೊಂಡು ಪಟಾಕಿ ಸಿಡಿಸಿ ಸಂಭ್ರಮಿಸದರು.
ಕೇಸರಿ ಯೂತ್ ಕ್ಲಬ್ ನ ಸದಸ್ಯರುಗಳು ಹಾಗೂ ಸಿದ್ಧಾಪುರದ ಸ್ಥಳೀಯರು ಪಾಲ್ಗೊಂಡು
ನಂತರ ಬಸ್ ನಿಲ್ದಾಣದಲ್ಲಿ ಪ್ರವೀಣ್ ಸಿದ್ಧಾಪುರ ರವರಿಗೆ ಕನ್ನಡ ಶಾಲುಗಳನ್ನು ಹಾಗೂ ಹೂವಿನ ಹಾರಗಳನ್ನು ಹಾಕುವ ಮೂಲಕ ಸನ್ಮಾನಿಸಿದರು.
ಈ ಸಂಧರ್ಭ ಕೇಸರಿ ಯೂತ್ ಕ್ಲಬ್ ನ ಪ್ರಮುಖರಾದ ರದೀಶ್, ಶಾಜಿ, ವಿಜೇಶ್, ಮಂಜು, ರಾಜ, ದಿನೇಶ್, ಸಂಜಯ್, ಸಂದೀಪ್, ಅನಿಲ್ ಮತ್ತಿತರರು ಹಾಗೂ ಸ್ಥಳೀಯರು ಹಾಜರಿದ್ದರು..







