Breaking News :

ಫೆ.28ರಂದು ಚೆಟ್ಟಿಮಾನಿಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ

 


ಜನವಾಹಿನಿ News ಮಡಿಕೇರಿ : ಹಿಂದೂ ಸಂಗಮ ಆಯೋಜನಾ ಸಮಿತಿಯ ಚೆಟ್ಟಿಮಾನಿ ಮಂಡಲ ವತಿಯಿಂದ ಫೆ.೨೮ರಂದು ಪದಕಲ್ಲು ಗ್ರಾಮದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮ ಸಂಯೋಜಕರಾದ ವಿವೇಕ್ ಕೆದಂಬಾಡಿ ತಿಳಿಸಿದರು.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂಬಾಂಧವರು ಒಗ್ಗಟ್ಟಾಗಿ ಹಿಂದು ಸಂಸ್ಕೃತಿ, ಆಚಾರ, ವಿಚಾರ ರಕ್ಷಿಸಿಸುವುದರ ಜತೆಗೆ ಸಮಾಜಿಕ ಬದ್ಧತೆಯನ್ನು ಪ್ರದರ್ಶಸಬೇಕಾಗಿದೆ. ಅಲ್ಲದೇ, ಮಾತೃಭೂಮಿ, ಹಿಂದೂಧರ್ಮ ಮತ್ತು ಸಂಸ್ಕೃತಿ ರಕ್ಷಣೆ ಹಾಗೂ ಸಂವರ್ಧನೆ ಪ್ರತಿಯೊಬ್ಬ ಹಿಂದೂವಿನ ಕರ್ತವ್ಯವಾಗಿದೆ. ಹಿಂದೂ ಸಂಘಟಿತನಾದಾಗ ಮಾತ್ರ ಧರ್ಮ ಬಲಿಷ್ಠವಾಗುತ್ತದೆ. ಮಾತೃಭೂಮಿ ರಕ್ಷಣೆಯಾಗುತ್ತದೆ. ಈ ಮಹತ್ವದ ಉದ್ದೇಶದಿಂದ ಚೆಟ್ಟಿಮಾನಿ ಮಂಡಲ ವತಿಯಿಂದ ಹಿಂದೂ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಹ ಸಂಯೋಜಕರಾದ ಶರತ್ ಪದಕಲ್ಲು ಮಾತನಾಡಿ, ಅಂದು ಬೆಳಗ್ಗೆ ೯.೩೦ ಗಂಟೆಗೆ ಭಗವತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ದೇವಸ್ಥಾನದಿಂದ ಮೆರವಣಿಗೆ ಸಾಗಲಿದೆ. ಮೆರವಣಿಗೆಯಲ್ಲಿ ಕೇರಳದ ಚಂಡೆ, ಕಳಶಹೊತ್ತ ಮಹಿಳೆಯರು, ಮಕ್ಕಳ ಭಜನಾ ನೃತ್ಯ ಇತ್ಯಾದಿ ಗಮನ ಸೆಳೆಯಲಿದ್ದು, ಚೆಟ್ಟಿಮಾನಿಯ ಆಟದ ಮೈದಾನದಲ್ಲಿ ಮೆರವಣಿಗೆ ಸಮಾಪ್ತಿಗೊಳ್ಳಲಿದೆ. ಆ ನಂತರ ಬೌಧಿಕ್ ಆರಂಭವಾಗಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರುಣಾ ಜೂನಿಯನ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ದಾಯನ ರಾಮಕೃಷ್ಣ ಅವರು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕಡಗದಾಳು ಮಹೇಶ್ ಬೌದ್ಧಿಕ್ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಪದಕಲ್ಲು, ಕುಂದಚೇರಿ, ಕೋಪಟ್ಟಿ, ಚರಂಡೇಟಿ, ಸಿಂಗತ್ತೂರು ಗ್ರಾಮದ ಹಿಂದೂಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಂಡಲ ಸಮಿತಿಯ ಸ್ವಯಂ ಸ್ವೇವಕರಾದ ಕೆದಂಬಾಡಿ ಜೀತನ್, ಕುದುಪಜೆ ಶಿವಕುಮಾರ್, ಶರತ್ ಶೆಟ್ಟಿ, ಸೋಮಪ್ಪ ಪೂಜಾರಿ ಉಪಸ್ಥಿತರಿದ್ದರು.

Share this article

ಟಾಪ್ ನ್ಯೂಸ್

More News