Breaking News :

ಬೈಕ್ ಮೇಲೆ ಕಾಡುಹಂದಿ ದಾಳಿ : ಸವಾರರಿಗೆ ಗಂಭೀರ ಗಾಯ 


ಜನವಾಹಿನಿ News ಸಿದ್ದಾಪುರ : ಕಾಡುಹಂದಿ ದಾಳಿಗೆ ಸಿಲುಕಿ ಬೈಕ್ ಸವಾರಿಬ್ಬರು ಗಂಭೀರ ಗಾಯಗೊಂಡ ಘಟನೆ ನೆಲ್ಯಾಹುದಿಕೇರಿ ಬಳಿಯ ಅತ್ತಿಮಂಗಲ ಬಳಿ ನಡೆದಿದೆ.

ಕೂಡ್ಲೂರು ಚೆಟ್ಟಳ್ಳಿ ನಿವಾಸಿಯಾಗಿರುವ ಹರಿಚಂದ್ರ ಮತ್ತು ಹರಿಲಾಲ್ ಎಂಬುವವರೇ ಹಂದಿ ದಾಳಿಗೆ ಸಿಲುಕಿ ಗಾಯಗೊಂಡವರು. ಇವರಿಬ್ಬರು ಅಪ್ಪ ಮಗ ಎಂದು ತಿಳಿದುಬಂದಿದೆ.

ನೆನ್ನೆ ರಾತ್ರಿ ಕೂಡ್ಲೂರು ಚೆಟ್ಟಳ್ಳಿಯಿಂದ ಕರಡಿಗೋಡುವಿನಲ್ಲಿರುವ ತಮ್ಮ ಮಗಳ ಮನೆಗೆ ತೆರಳುತ್ತಿರುವ ಸಂದರ್ಭ ನೆಲ್ಯಾಹುದಿಕೇರಿ ವ್ಯಾಪ್ತಿಯ ಅತ್ತಿಮಂಗಲ ಬಳಿ ಘಟನೆ ನಡೆದಿದ್ದು, ಇಬ್ಬರಿಗೂ ತಲೆ, ಬೆನ್ನಿನ ಭಾಗ ಹಾಗೂ ಕೈ ಕಾಲುಗಳಿಗೆ ಗಂಭೀರ ಪೆಟ್ಟಾಗಿದೆ. ಗಾಯಾಳುಗಳನ್ನು ಕಂಡ ಸಾರ್ವಜನಿಕರು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದಾರೆ.

ಗಾಯಾಳುಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೇಟಿಮಾಡಿ ಆರೋಗ್ಯ ವಿಚಾರಿಸಿದ್ದು, ಗಾಯಾಳುಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.

Share this article

ಟಾಪ್ ನ್ಯೂಸ್

More News