Breaking News :

ಭಗವತಿ ಯುವಕ ಸಂಘದಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ  : ರಾಷ್ಟ್ರ ರಕ್ಷಣೆ ಮಾತ್ರ ದೇಶ ಸೇವೆಯಲ್ಲ – ರಾಷ್ಟ್ರೀಯ ಹಬ್ಬಗಳ ಆಚರಣೆ ಮೂಲಕ ದೇಶಪ್ರೇಮವನ್ನು ಹಿಮ್ಮಡಿಗೊಳಿಸುವುದು ಕೂಡ ದೇಶ ಸೇವೆಯೇ : ಪ್ರಕಾಶ್

ಭಗವತಿ ಯುವಕ ಸಂಘದಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ  

ರಾಷ್ಟ್ರ ರಕ್ಷಣೆ ಮಾತ್ರ ದೇಶ ಸೇವೆಯಲ್ಲ – ರಾಷ್ಟ್ರೀಯ ಹಬ್ಬಗಳ ಆಚರಣೆ ಮೂಲಕ ದೇಶಪ್ರೇಮವನ್ನು ಹಿಮ್ಮಡಿಗೊಳಿಸುವುದು ಕೂಡ ದೇಶ ಸೇವೆಯೇ : ಪ್ರಕಾಶ್


ಸಿದ್ದಾಪುರ : ಸಮೀಪದ ಇಂಜಿಲಗೆರೆ ಭಗವತಿ ಯುವಕ ಸಂಘದಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಸ್ಥಳೀಯ ಬೆಳೆಗಾರ ವೆಂಕಪ್ಪ ರೈ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಸ್ವಾತಂತ್ರ್ಯ ದೊರೆತು 79 ವರ್ಷ ಕಳೆದಿದ್ದರೂ ಇಂದಿಗೂ ನಾವು ಅದನ್ನು ಆಚರಣೆ ಮಾಡುತ್ತೇವೆ ಎಂದರೆ ಇದು ನಮಗೆ ಅಷ್ಟು ಸುಲಭವಾಗಿ ದೊರೆತಿಲ್ಲ ಹಲವರ ತ್ಯಾಗ ಬಲಿದಾನದಿಂದ ದೊರೆತದ್ದು, ಆದುದ್ದರಿಂದಲೇ ಈ ದಿನವನ್ನು ವಿಶೇಷವಾಗಿ ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ನಮ್ಮ ಹಿರಿಯರನ್ನು ನಾವು ಎಂದಿಗೂ ಮರೆಯಬಾರದು ಎಂದರು.

ಮಾಜಿ ಯೋಧ ಪ್ರಕಾಶ್ ಮಾತನಾಡಿ, ಕೇವಲ ರಾಷ್ಟ್ರ ರಕ್ಷಣೆ ಮಾತ್ರ ದೇಶ ಸೇವೆಯಲ್ಲ. ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವ ಮೂಲಕ ನಮ್ಮ ಹಿಂದಿನವರ ಪ್ರಾಣತ್ಯಾಗ ಹೋರಾಟಗಳನ್ನು ಮುಂದಿನ ಪೀಳಿಗೆಗೆ ಮನದಟ್ಟು ಮಾಡುವ ಮೂಲಕ ದೇಶಪ್ರೇಮವನ್ನು ಹಿಮ್ಮಡಿಗೊಳಿಸುವುದು ಕೂಡ ದೇಶ ಸೇವೆಯೇ ಅಂತಹ ಸೇವೆ ಗೈಯುತ್ತಿರುವ ಭಗವತಿ ಯುವಕ ಸಂಘದ ಕಾರ್ಯ ಶ್ಲಾಘನೀಯ ಎಂದರು.

ಸ್ವಯಂ ಸೇವಕ ಮೋಹನ್ ಮಾತನಾಡಿ, ಭಾರತಾಂಬೆಯನ್ನು ವಿದೇಶಿಗರ ಮುಷ್ಟಿಯಿಂದ ಮುಕ್ತಿಗೊಳಿಸಿ ನಮಗೆ ಎಲ್ಲಾ ರೀತಿಯಲ್ಲೂ ಸಾಂವಿಧಾನಿಕ ಸ್ವಾತಂತ್ಯವನ್ನು ನೀಡಿದ ಈ ಸುದಿನವನ್ನ ಪ್ರತಿಯೊಬ್ಬರು ಆಚರಿಸುವ ಅಗತ್ಯತೆ ಇದೆ. ನಮ್ಮ ಮುಂದಿನ ತಲೆಮಾರಿಗೆ ಸ್ವಾತಂತ್ರ್ಯದ ನೈಜ್ಯತೆಯನ್ನು ಮುಟ್ಟಿಸುವ ಕೆಲಸವಾಗಬೇಕು ಆ ಮೂಲಕ ಸದೃಢ ಸಮಾಜ ನಿರ್ಮಾಣವಾಗಬೇಕು ಇಂತಹ ಚಿಂತನೆ ಹೊಂದಿರುವ ಭಗವತಿ ಸಂಘದ ಕಾರ್ಯ ಹೀಗೆ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭ ಭಗವತಿ ಸಂಘದ ಪದಾಧಿಕಾರಿಗಳು, ಸ್ಥಳೀಯರು ಸಂಭ್ರಮದಲ್ಲಿ ಭಾಗವಹಿಸಿದ್ದರು.
ಇದೇ ವೇಳೆ ನೆರೆದಿದ್ದವರಿಗೆ ಸಂಘಟನೆ ವತಿಯಿಂದ ಸಿಹಿ ಹಂಚಲಾಯಿತು.

Share this article

ಟಾಪ್ ನ್ಯೂಸ್

More News