ಜನವಾಹಿನಿ NEWS ಸಿದ್ದಾಪುರ : ಗೌರಿ ಗಣೇಶ ಹಬ್ಬದ ಅಂಗವಾಗಿ ಇಲ್ಲಿಗೆ ಸಮೀಪದ ಇಂಜಿಲಗೆರೆಯಲ್ಲಿ ಭಗವತಿ ಯುವಕ ಸಂಘದ ವತಿಯಿಂದ 10ನೇ ವರ್ಷದ ಗೌರಿ ಗಣೇಶೋತ್ಸವ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಯಿತು.
ಇಂಜಿಲಗೆರೆ ಪೂಮಾಡಪುರ ಮುತ್ತಪ್ಪ ದೇವಾಲಯ ಆವರಣದಲ್ಲಿ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ರಾಮ ಮಂದಿರದ ರವಿ ಭಟ್ಟರ ನೇತೃತ್ವದಲ್ಲಿ ವಿಶೇಷ ಪೂಜೆ ಕೈಂಕರ್ಯ ಜರುಗಿತು. ದೇವರಿಗೆ ಹೋಮ ವಿಶೇಷ ಪೂಜೆ, ಮಂಗಳಾರತಿ, ನೈವೇದ್ಯ ನೆರವೇರಿಸಿದ ಬಳಿಕ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಸುತ್ತಮುತ್ತಲ ಪ್ರದೇಶದ ಜನತೆ ಪೂಜೆಯಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿ ದೇವರ ಪ್ರಸಾದ ಸ್ವೀಕರಿಸಿದರು.
ದೇವರಿಗೆ ಪ್ರತಿದಿನಿ ವಿಶೇಷ ಪೂಜೆನಡೆಯಲಿದ್ದು, ಮುಂದಿನ ಭಾನಾವರ ಆ.31ರಂದು ಭವ್ಯ ಮಂಟಪದಲ್ಲಿ ಗೌರಿ ಗಣೇಶೋತ್ಸವ ಮೂರ್ತಿಗಳನ್ನು ಅದ್ಧೂರಿಯಾಗಿ ಮೆರವಣೆಯಲ್ಲಿ ಸಾಗಿಸಿ ಗುಹ್ಯ ಅಗಸ್ತೇಶ್ವರ ದೇವಾಲಯ ಬಳಿ ಕಾವೇರಿ ನದಿಗೆ ವಿಸರ್ಜನೆ ಮಾಡಲಿದ್ದೇವೆ, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಭಗವತಿ ಯುವಕ ಸಂಘ ಮನವಿ ಮಾಡಿದೆ.
ಈ ಸಂದರ್ಭ ಭಗವತಿ ಯುವಕ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸದಸ್ಯರು ಸೇರಿದಂತೆ ಸ್ಥಳೀಯರು ಇದ್ದರು.







