ಜನವಾಹಿನಿ News ಮಡಿಕೇರಿ : ವ್ಯಕ್ತಿಯೋರ್ವ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದಿದೆ.
ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಹಿಂಬದಿ ಬಡಾವಣೆ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದ್ದು, ಉಪನ್ಯಾಸಕಿ ಕವಿತಾ ರವರ ಪತಿ ಮಡಿಕೇರಿಯ ಆಮೆಮನೆ ದೇವಿಪ್ರಸಾದ್ (43) ಎಂಬುವವರೇ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ.
ಘಟನಾ ಸ್ಥಳಕ್ಕೆ ನಗರ ಠಾಣೆಯ ಠಾಣಾಧಿಕಾರಿ ಅನ್ನಪೂರ್ಣ, ಡಿವೈಎಸ್ ಪಿ.ಸೂರಜ್ , ಸರ್ಕಲ್ ಇನ್ಸ್ಪೆಕ್ಟರ್ ರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.







