Breaking News :

ಮಡಿಕೇರಿ ಪೊಲೀಸ್ ವಸತಿ ಗೃಹಗಳಲ್ಲೇ ಕೈಚಳಕ ತೋರಿದ ಖದೀಮರು : ಪ್ರಕರಣ ಭೇದಿಸಿದ ಕೊಡಗು ಪೊಲೀಸ್  ಇಬ್ಬರು ಆರೋಪಿಗಳು ಖಾಕಿ ವಶಕ್ಕೆ – ಪಿಎಸ್ಐ ಮಂಜುನಾಥ್ ಮತ್ತು ತಂಡಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತ 

 

 

ಮಡಿಕೇರಿ ಪೊಲೀಸ್ ವಸತಿ ಗೃಹಗಳಲ್ಲೇ ಕೈಚಳಕ ತೋರಿದ ಖದೀಮರು : ಪ್ರಕರಣ ಭೇದಿಸಿದ ಕೊಡಗು ಪೊಲೀಸ್ 

ಇಬ್ಬರು ಆರೋಪಿಗಳು ಖಾಕಿ ವಶಕ್ಕೆ – ಪಿಎಸ್ಐ ಮಂಜುನಾಥ್ ಮತ್ತು ತಂಡಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತ


ಮಡಿಕೇರಿ : ಪೊಲೀಸರ ವಸತಿ ಗೃಹದಲ್ಲೇ ಕಳ್ಳತನ,ರಕ್ಷಣೆ ನೀಡುವ ಆರಕ್ಷಕರಿಗೆ ರಕ್ಷಣೆ ಇಲ್ಲವೇ?…..ಎಂದು ಇತ್ಯಾದಿಯಾಗಿ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದ, ಜಿಲ್ಲಾಕೇಂದ್ರ ಮಡಿಕೇರಿಯಲ್ಲಿರುವ ಪೊಲೀಸ್ ಗೃಹಗಳಲ್ಲಿ ಜೂನ್ 17ರಂದು ನಡೆದಿದ್ದ, ಪೊಲೀಸ್ ವಸತಿ ಗೃಹಗಳಲ್ಲಿನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ.

ಪೊಲೀಸರ ಮನೆಗಳಿಗೆ ಕನ್ನ ಹಾಕಿದ್ದ ಖದೀಮರು ಸುಮಾರು ಎಂಟು ಮನೆಗಳ ಬೀಗ ಹೊಡೆದು 90,000 ನಗದು ಸೇರಿದಂತೆ ಸ್ವಲ್ಪ ಪ್ರಮಾಣದ ಚಿನ್ನ-ಬೆಳ್ಳಿ ಆಭರಣಗಳನ್ನು ಕಳ್ಳರು ಕಳ್ಳತನ ಮಾಡುವ ಮೂಲಕ ಕೊಡಗು ಪೊಲೀಸರಿಗೆ ಎಸೆದಿದ್ದ ಸವಾಲನ್ನು ಕೊಡಗು ಎಸ್.ಪಿ. ರಾಮರಾಜನ್ ಸವಾಲಾಗಿಯೇ ಸ್ವೀಕರಿಸಿ ಪ್ರಕರಣವನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿ-ಸಿಬ್ಬಂದಿಗಳ ವಿವಿಧ ತಂಡಗಳನ್ನು ರಚಿಸಿ ಆ ತಂಡಗಳಿಗೆ ಸಿಸಿಟಿವಿ ಪರಿಶೀಲಿಸುವ, ಮೊಬೈಲ್ ಟವರ್ ಡಂಪ್ ಪರಿಶೀಲಿಸುವ, ರಾಜ್ಯ – ಅಂತರ್ ರಾಜ್ಯ ಮೊಬೈಲ್ ಗಳ ಮಾಹಿತಿ ಸಂಗ್ರಹಿಸುವುದು ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ನೀಡಿ ಪ್ರತಿದಿನ ರಾತ್ರಿ ವಿಡಿಯೋ ಕಾನ್ಫರೆನ್ಸ್ ನಲ್ಲಿ ದೈನಂದಿನ ಪ್ರಗತಿಯನ್ನು ಪರಿಶೀಲಿಸಿ ಸಲಹೆ ಸೂಚನೆಗಳನ್ನು ನೀಡುತ್ತಿದ್ದು, ಈ ಬಗ್ಗೆ ರಚಿತವಾದ ಪತ್ತೆ ತಂಡಗಳು ಕೊಡಗು, ಮಂಗಳೂರು, ಉಡುಪಿ, ಹಾಸನ,ಚಿಕ್ಕ ಮಗಳೂರು ಜಿಲ್ಲೆ ಸೇರಿದಂತೆ ಗೋವಾದವರೆಗೂ ಪತ್ತೆ ಕಾರ್ಯದಲ್ಲಿ ತೊಡಗಿಕೊಂಡಿದ್ದವು. ಈ ಎಲ್ಲಾ ಕೆಲಸ ಕಾರ್ಯಕ್ಕೆ ಅಡಿಷನಲ್ ಎಸ್.ಪಿ. ಸಾಥ್ ನೀಡಿದ್ದರು.

ಪೊಲೀಸರಿಗೆ ಸವಾಲಾಗಿದ್ದ ಪೊಲೀಸ್ ಕ್ವಾಟ್ರಸ್ ಕಳ್ಳತನ ಪ್ರಕರಣವು ಪೊಲೀಸರ ನೈತಿಕ ಸ್ಥೈರ್ಯದ ಪ್ರಶ್ನೆಯಾಗಿದ್ದು ಕಬ್ಬಿಣದ ಕಡಲೆಯಾಗಿದ್ದ ಪ್ರಕರಣದ ಪತ್ತೆಯ ಮೂಲ ಮಧ್ಯಪ್ರದೇಶಕ್ಕೆ ತಲುಪಿದ್ದು ರೋಚಕ.

ಮಾನ್ಯ ಎಸ್.ಪಿ ಸಾಹೇಬರ ಕಾರ್ಯ ಕುಶಲತೆಯ ಮಾರ್ಗದರ್ಶನದಿಂದ ಪೊಲೀಸ್ ಕ್ವಾಟ್ರಸ್ ನಲ್ಲಿ ಕಳ್ಳತನ ಮಾಡಿದ್ದ ಕಳ್ಳರು ಮಧ್ಯಪ್ರದೇಶದ ಧಾರ್ ಜಿಲ್ಲೆಯ ನಟೋರಿಯಸ್ ಗ್ಯಾಂಗ್ ನವರು ಎಂದು ಪತ್ತೆ ಹಚ್ಚಿದ್ದು ಯಶಸ್ಸಿನ ಮೊದಲ ಹೆಜ್ಜೆ ಆಗಿದ್ದರೂ ಸಹ ದೂರದ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಕಳ್ಳರನ್ನು ಅಲ್ಲಿಂದ ಪತ್ತೆ ಹಚ್ಚಿ ಕರೆ ತರುವುದು ಸವಾಲಿನ ಸಂಗತಿಯಾಗಿತ್ತು.

ಈ ಸವಾಲನ್ನು ಎದುರಿಸಲು ಎಸ್‌.ಪಿ ಸಾಹೇಬರು ರಚಿಸಿದ ಪಿಎಸ್‌ಐ ಮಂಜುನಾಥ್ ಹಾಗೂ ಸಿಬ್ಬಂದಿಗಳಾದ ಯೋಗೇಶ್, ನಿರಂಜನ್, ಪ್ರಭಾಕರ್, ಮುನೀರ್ ರವರುಗಳ ತಂಡವು ಸರಿ ಸುಮಾರು 25 ದಿನಗಳ ಕಾಲ ಮಧ್ಯಪ್ರದೇಶದ ಧಾರ್, ಇಂದೋರ್, ರಾಜ್ ಘರ್,ತಾಂಡ ಪ್ರದೇಶಗಳಲ್ಲಿ ಸ್ಥಳೀಯರಂತೆ ಬೆರೆಯಲು ವೇಷ ಮರೆಸಿಕೊಂಡು ಕಾರ್ಯಾಚರಣೆ ಮಾಡಿದ್ದು, ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆದು ತಿಂಡಿ-ಊಟ ಸರಿ ಹೊಂದದೆ ಎರಡು ಹೊತ್ತಿನ ಸರಳ ಊಟಕ್ಕೆ ತಮ್ಮನ್ನು ಒಗ್ಗಿಸಿಕೊಂಡು ಪ್ರಕರಣದ ಪ್ರಮುಖ ಆರೋಪಿಯಾದ ಆಂಧ್ರಪ್ರದೇಶ, ತೆಲಂಗಾಣ, ಗೋವಾ, ಕರ್ನಾಟಕ, ಗುಜರಾತ್ ,ತಮಿಳು ನಾಡು, ಮಧ್ಯ ಪ್ರದೇಶ ರಾಜ್ಯಗಳಲ್ಲಿ 2020 ನೇ ಇಸವಿಯಿಂದ ಈವರೆಗೆ ಸರಿ ಸುಮಾರು 20 ಕ್ಕೂ ಹೆಚ್ಚು ಕಳ್ಳತನಗಳನ್ನು ಮಾಡಿರುವ ಆರೋಪಿ ಸುರೇಶ್ ಸೇಂಗರ್ ಹಾಗೂ ಆತನಿಗೆ ಸಹಕರಿಸಿದ ಮನೀಶ್ ಎಂಬುವವರನ್ನು ಖಚಿತ ಮಾಹಿತಿಯೊಂದಿಗೆ ದಿನಾಂಕ 16.8.24 ರಂದು ಅಂತಿಮವಾಗಿ ಪಿರಿಯಾಪಟ್ಟಣದಲ್ಲಿ ಬಂಧಿಸುವ ಮೂಲಕ ಕೊಡಗು ಪೋಲಿಸರಿಗೆ ಸವಾಲಾಗಿ ಪರಿಣಮಿಸಿದ್ದ ಪೊಲೀಸ್ ಕ್ವಾಟ್ರರ್ಸ್ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚಿರುತ್ತಾರೆ.

ಈ ಪ್ರಕರಣಗಳನ್ನು ಪತ್ತೆಹಚ್ಚಲು ಪೊಲೀಸ್ ತಂಡಗಳಿಗೆ ಪ್ರೇರಣೆಯನ್ನು ನೀಡಿ ಸೂಕ್ತ ಸಲಹೆ -ಮಾರ್ಗದರ್ಶನ, ಅಗತ್ಯವಿರುವ ಅನುಕೂಲತೆಗಳನ್ನು ಕಲ್ಪಿಸಿಕೊಟ್ಟು ಪೊಲೀಸರ ನೈತಿಕ ಸ್ಥೈರ್ಯ ಹೆಚ್ಚಿಸಲು ಕಾರಣಿಕರ್ತರಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್. ಈ ಕಾರ್ಯಕ್ಕೆ ಒತ್ತಾಸೆಯಾಗಿ ನಿಂತ ಹೆಚ್ಚುವರಿ ಪೊಲೀಸ್ವರಿಷ್ಠಾಧಿಕಾರಿ ದಿನೇಶ್ ಕುಮಾರ್, ಮಡಿಕೇರಿ ಉಪವಿಭಾಗದ ಡಿ,ವೈ,ಎಸ್,ಪಿ ಸೂರಜ್ ಸೇರಿದಂತೆ ಪೊಲೀಸ್ ಕ್ವಾಟ್ರಸ್ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಆಹರ್ನಿಶಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿದ್ದ ಜಿಲ್ಲೆಯ ಪೊಲೀಸ್ ಅಧಿಕಾರಿ-ಸಿಬ್ಬಂದಿಗಳಿಗೆ ಮಡಿಕೇರಿ ನಗರ ಪೊಲೀಸರು ಧನ್ಯವಾದ ಸಮರ್ಪಿಸಿದ್ದಾರೆ.

Share this article

ಟಾಪ್ ನ್ಯೂಸ್

More News