ಮರ ಬಿದ್ದು ಮಾರುತಿ ವ್ಯಾನ್ ಜಖಂ : ಚಾಲಕ ಪಾರು
ಮಡಿಕೇರಿ : ಸೋಮವಾರಪೇಟೆ – ಶಾಂತಳ್ಳಿ ರಸ್ತೆಯ ಜೆಡಿಗುಂಡಿ ಬಳಿ ಹರಗ ಗ್ರಾಮದ ಚರಣ್ ರವರ ಮಾರುತಿ ಓಮ್ನಿ ವ್ಯಾನ್ ಮೇಲೆ ಮರ ಬಿದ್ದು ತೀವ್ರವಾಗಿ ಜಖಂಗೊಂಡಿದೆ. ಅದೃಷ್ಟವಶಾತ್ ಅದರಲ್ಲಿದ್ದ ಚಾಲಕ ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.








