ಜನವಾಹಿನಿ News ಗೋಣಿಕೊಪ್ಪ : ದೊಣ್ಣೆಯಿಂದ ಹೊಡೆದು ಆಟೋ ಡ್ರೈವರ್ ಒಬ್ಬರನ್ನು ಕೊಲೆ ಮಾಡಿರುವ ಘಟನೆ ಗೋಣಿಕೊಪ್ಪಲು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಂದು ಬೆಳಗಿನ ಜಾವ ಗೋಣಿಕೊಪ್ಪಲು ಆಸ್ಪತ್ರೆಗೆ ಹಲ್ಲೆಗೆ ಒಳಗಾದವನನ್ನು ಚಿಕಿತ್ಸೆಗೆ ಕರೆದುಕೊಂಡು ಬಂದ ಕೆಲವೇ ಕ್ಷಣಗಳಲ್ಲಿ ಆತ ಮೃತಪಟ್ಟಿದ್ದಾನೆ.
ಗೋಣಿಕೊಪ್ಪಲಿನ ಹರಿಶ್ಚಂದ್ರ ಪುರದ ನಿವಾಸಿ ಖಾಸಗಿ ಸಂಸ್ಥೆಯಲ್ಲಿ ಡ್ರೈವರ್ ಹಾಗೂ ಉಳಿದ ಸಮಯದಲ್ಲಿ ಆಟೋ ಡ್ರೈವರ್, ಆಗಿ ಕಾರ್ಯ ನಿರ್ವಹಿಸುತ್ತಿದ್ದ ನವಾಜ್ (39) ಎಂಬುವನೆ ಹತ್ತಿಗಿಡಾಗಿದ್ದಾನೆ.
ರಾತ್ರಿ ಹಾತುರೂ ಕುಂದಾ ರಸ್ತೆ ಮಾರ್ಗಕ್ಕೆ ಆಟೋ ಡ್ರೈವರ್ ಅನ್ನು ಕರೆಸಿಕೊಂಡು ಆತನ ಮೇಲೆ ಮಾರಣಾಂತಿಕ ಹಲ್ಲೆಯನ್ನು ನಡೆಸಲಾಗಿದೆ ಎಂದು ಹೇಳಲಾಗಿದೆ. ಗೋಣಿಕೊಪ್ಪಲು ಪೊಲೀಸ್ ವೃತ್ತ ನಿರೀಕ್ಷಕರಾದ ಶಿವರಾಜ್ ಮುದುವಾಳ್, ಠಾಣಾಧಿಕಾರಿ ಪ್ರದೀಪ್ ತಂಡ ತನಿಖೆ ಕೈಗೊಂಡಿದ್ದು ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಾಗಿದೆ. ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದ ಶವಗಾರದಲ್ಲಿ ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಇರಿಸಲಾಗಿದೆ.







