Breaking News :

ಮಾ.5 ರಂದು ಸಿದ್ದಾಪುರದಲ್ಲಿ ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ

 


ಜನವಾಹಿನಿ News ಸಿದ್ದಾಪುರ : ಕೊಡಗು ಜಿಲ್ಲಾ, ತಾಲ್ಲೂಕು, ಅಮ್ಮತ್ತಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಿದ್ದಾಪುರ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ಮೊಣ್ಣಂಡ ಕೆ. ಚಂಗಪ್ಪ ವಿರಾಜಪೇಟೆ ಹಾಗೂ ಚೆರಿಯಮನೆ ದಿ. ಕೃಷ್ಣಪ್ಪ ಮರಗೋಡು ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ ಮಾ.5 ರಂದು. ನಡೆಯಲಿದೆ.

ಸಿದ್ದಾಪುರ ಪ್ರೌಢಶಾಲೆಯ ಸಭಾಂಗಣದಲ್ಲಿ ಬೆಳಿಗ್ಗೆ 10.30 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಸಿದ್ದಾಪುರ ಪ್ರೌಢಶಾಲೆ ಸಮಿತಿ ಅಧ್ಯಕ್ಷ ಪಿ.ಸಿ. ಕುಶಾಲಪ್ಪ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಅಮ್ಮತ್ತಿ ಹೋಬಳಿ ಘಟಕದ ಅಧ್ಯಕ್ಷ ಟಿ.ಹೆಚ್.ಮಂಜುನಾಥ್ ವಹಿಸಲಿದ್ದಾರೆ.

ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಡಿ.ರಾಜೇಶ್ ಪದ್ಮನಾಭ, ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.

ಸಾಹಿತಿಗಳಾದ ಶ್ರೀಮತಿ ಸೋಮೆಯಂಡ ಕೌಶಲ್ಯ ಸತೀಶ್ ಹಾಗೂ ದೇವಣಗೇರಿ ಬಿ.ಸಿ. ಪ್ರೌಢಶಾಲೆಯ ಮುಖ್ಯ ಶಿಕ್ಷಕ ಲೋಕೇಶ್ ಹೆಚ್.ಡಿ ದತ್ತಿನಿಧಿ ಉಪನ್ಯಾಸ ನೀಡಲಿದ್ದು, ಶ್ರೀಮತಿ ಸೂದನ ಕಮಲ ರಾಘವಯ್ಯ, ಜನಪದ ಕುರಿತು ಉಪನ್ಯಾಸ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್‌, ಕ.ಸಾ.ಪ. ಜಿಲ್ಲಾ ಸದಸ್ಯ ಎಂ. ಎಸ್. ವೆಂಕಟೇಶ್, ಸಿದ್ದಾಪುರ ಪ್ರೌಢಶಾಲೆ, ಕಾರ್ಯದರ್ಶಿ ಪಿ. ಸಿ. ಅಚ್ಚಯ್ಯ, ಮುಖ್ಯ ಶಿಕ್ಷಕ ಬಾಬು ನಾಯ್ಕ ಡಿ, ಕ.ಸಾ.ಪ. ಜಿಲ್ಲಾ ಸಮಿತಿ ಸದಸ್ಯ ಎಂ. ಬಿಜೋಯ್, ಗುಹ್ಯ ಅಗಸ್ತೇಶ್ವರ ಪ್ರಾ.ಕೃ.ಪ.ಸ.ಸಂಘ ಬ್ಯಾಂಕಿನ ನಿರ್ದೇಶಕ ಎಸ್.ಬಿ. ಪ್ರತೀಶ್, ಟೋಮಿ ಥೋಮಸ್‌ (ನಾ ಕನ್ನಡಿಗ), ಸಾವಿತ್ರಿ, ಶಭರೀಶ್ ಶೆಟ್ಟಿ, ವಿ.ಎಸ್. ಗುರುಧರ್ಶನ್, ಸಿ.ವಿಜಯಲಕ್ಷ್ಮೀ, ಕೆ.ಆರ್.ಸೂರಜ್, ಮುನೀರ್ ಅಹಮ್ಮದ್, ರೇವತಿ ರಮೇಶ್,ಎಸ್. ಎಸ್. ಸಂಪತ್ ಕುಮಾ‌ರ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಅಮ್ಮತ್ತಿ ಹೋಬಳಿ ಘಟಕದ ಅಧ್ಯಕ್ಷ ಟಿ. ಹೆಚ್ ಮಂಜುನಾಥ್ ತಿಳಿಸಿದ್ದಾರೆ.

Share this article

ಟಾಪ್ ನ್ಯೂಸ್

More News