ಜನವಾಹಿನಿ NEWS ಮಡಿಕೇರಿ : ಸಮೀಪದ ಮೇಕೇರಿಯಲ್ಲಿ ಬೃಹತ್ ಗಾತ್ರದ ನಾಗರ ಹಾವು ರಕ್ಷಣೆ ಮಾಡುವಲ್ಲಿ ಕಗ್ಗೋಡ್ಲುವಿನ ಉರಗ ರಕ್ಷಕ ಪಿಯೂಷ್ ಪೆರೇರಾ ಯಶಸ್ವಿಯಾಗಿದ್ದಾರೆ.
ಮೇಕೇರಿ ಗ್ರಾಮದ ದೀಪಕ್ ಎಂಬುವವರ ಮನೆಯ ಪಕ್ಕದಲ್ಲಿರುವ ಕಾರ್ ಶೆಡ್ ನಲ್ಲಿ ಬೃಹತ್ ಗಾತ್ರದ ನಾಗರ ಹಾವೊಂದು ಕಾಣಿಸಿಕೊಂಡಿದೆ ಕೂಡಲೇ ದೀಪಕ್ ಉರಗ ರಕ್ಷಕ ಪಿಯೂಷ್ ಪೆರೇರಾ ಅವರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೆರೇರಾ ಸುಮಾರು 6 ಅಡಿ ಉದ್ದದ ಬೃಹತ್ ನಾಗರ ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಬಳಿಕ ಸೆರೆ ಹಿಡಿದ ಹಾವನ್ನು ಮಡಿಕೇರಿಯ ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.








