Breaking News :

ಯುವ ಪೀಳಿಗೆ ಸದೃಢ ದೇಶ ಕಟ್ಟುವ ಬಗ್ಗೆ ಚಿಂತಿಸಬೇಕು : ಠಾಣಾಧಿಕಾರಿ ಮಂಜುನಾಥ್

 


ಯುವ ಪೀಳಿಗೆ ಸದೃಢ ದೇಶ ಕಟ್ಟುವ ಬಗ್ಗೆ ಚಿಂತಿಸಬೇಕು : ಠಾಣಾಧಿಕಾರಿ ಮಂಜುನಾಥ್

ಸಿದ್ದಾಪುರ ಆಟೋ ಚಾಲಕರಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ


ಸಿದ್ದಾಪುರ : ಇಂದಿನ ಯುವ ಸಮೂಹ ಮಾದಕ ವಸ್ತುಗಳಿಗೆ ಮಾರುಹೋಗದೇ ಸದೃಢ ದೇಶ ಕಟ್ಟುವ ಚಿಂತನೆಯನ್ನು ಮಾಡಬೇಕಾಗಿದೆ ಎಂದು ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಅಭಿಪ್ರಾಯ ಪಟ್ಟಿದ್ದಾರೆ.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಆಟೋ ಚಾಲಕರ ಸಂಘದಿಂದ ಆಯೋಜಿಸಲಾಗಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟ ತ್ಯಾಗ ಬಲಿದಾನಗಳನ್ನು ಸ್ಮರಿಸಿದರು.

ಇಂದು ಯುವಕರು ಹೆಚ್ಚಾಗಿ ಮಾದಕ ವ್ಯಸನಿಗಳಾಗುತ್ತಿರುವ ಪ್ರಸಂಗ ಕೂಡ ಕಂಡು ಬರುತ್ತಿದೆ. ನಾವು ಅದರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದರು. ಅದರ ಜಾಲ ಇನ್ನೂ ಸಮಾಜದಲ್ಲಿ ಬೇರೂರಿದೆ ಅದನ್ನು ಪೂರ್ಣವಾಗಿ ಹತೋಟಿಗೆ ತರಬೇಕಾದರೆ ಸಾರ್ವಜನಿಕರ ಸಹಕಾರ ಅತ್ಯವಶ್ಯಕ ಎಲ್ಲರೂ ಇಲಾಖೆಯೊಂದಿಗೆ ಕೈಜೋಡಿಸಿದರೆ ಅದಕ್ಕೆ ಅಂತ್ಯ ಕಾಣಬಹುದು ಎಂದರು.

ಈ ಸಂದರ್ಭ ಸಿದ್ದಾಪುರ ಆಟೋ ಚಾಲಕರು ಹಾಗೂ ಮಾಲೀಕರು, ಸಂಘದ ಪದಾಧಿಕಾರಿಗಳು ಸಾರ್ವಜನಿಕರು ಪಾಲ್ಗೊಂಡಿದ್ದರು.

ಇದೇ ವೇಳೆ ನೆರೆದಿದ್ದವರಿಗೆ ಸಂಘಟನೆ ವತಿಯಿಂದ ಸಿಹಿ ಹಂಚಿ ಆಟೋ ಚಾಲಕರು ಸಂಭ್ರಮಿಸಿದರು.

ಚಿತ್ರ ಕೃಪೆ : ಕವಿರಾಜ್ ಕೊಡಗು

Share this article

ಟಾಪ್ ನ್ಯೂಸ್

More News