ರಸ್ತೆ ಮಧ್ಯೆ ಮೋರಿ ಕುಸಿದು ಸಂಚಾರಕ್ಕೆ ಅಡ್ಡಿ
ವಿರಾಜಪೇಟೆ : ಇಲ್ಲಿನ ಮಗ್ಗುಲ ಗ್ರಾಮ ವಿನಾಯಕನಗರದ ಕೆಳಭಾಗದಲ್ಲಿ ಇರುವಂತ ರಸ್ತೆಯೊಂದು ಸಂಪೂರ್ಣವಾಗಿ ಕುಸಿದಿದ್ದು, ಶಾಲಾ ಮಕ್ಕಳಿಗೆ, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿದೆ ಕೂಡಲೇ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಕುಸಿದಿರುವ ಮೋರಿ ಬದಲಾಯಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.








