ರಾಷ್ಟ್ರ ಪ್ರಶಸ್ತಿ ವಿಜೇತ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರನ್ನು ಸನ್ಮಾನಿಸಿದ ಯದುವೀರ್ ಒಡೆಯರ್
ಮಡಿಕೇರಿ : ಕಂದೀಲು ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಮಡಿಕೇರಿಯ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರನ್ನು ಕೊಡಗು ಪತ್ರಕತ೯ರ ಸಂಘದ ವತಿಯಿಂದ ಆಯೋಜಿತ ಕಾಯ೯ಕ್ರಮದಲ್ಲಿ ಸಂಸದ ಯದುವೀರ್ ಒಡೆಯರ್ ಸನ್ಮಾನಿಸಿ ಗೌರವಿಸಿದರು.
ಮಡಿಕೇರಿಯ ರೆಡ್ ಬ್ರಿಕ್ಸ್ ಇನ್ ನ ಸತ್ಕಾರ್ ಸಭಾಂಗಣದಲ್ಲಿ ಆಯೋಜಿತ ಕೊಡಗು ಪತ್ರಕತ೯ರ ಸಂಘದ ವಿಷನ್ ಕೊಡಗು ಕಾಯ೯ಕ್ರಮದಲ್ಲಿ, ಕಂದೀಲು ಕನ್ನಡ ಚಿತ್ರಕ್ಕಾಗಿ ಅತ್ಯುತ್ತಮ ಪ್ರಾದೇಶಿಕ ಕನ್ನಡ ಚಿತ್ರ ಎಂಬ ರಾಷ್ಟ್ರಪ್ರಶಸ್ತಿ ಪಡೆದ ಚಿತ್ರದ ನಿಮಾ೯ಪಕಿ ನಿದೇ೯ಶಕಿ ಯಶೋಧ ಪ್ರಕಾಶ್ ಅವರನ್ನು ಸಂಸದರಾದ ಯದುವೀರ್ ಒಡೆಯರ್ ಸನ್ಮಾನಿಸಿ ಗೌರವಿಸಿದರು.
ಕನಾ೯ಟಕದಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಮೂರನೇ ಮಹಿಳಾ ನಿದೇ೯ಶಕಿ ಎಂಬ ಹಿರಿಮೆಗೆ ಕಾರಣರಾದ ಯಶೋಧ ಪ್ರಕಾಶ್ ಅವರ ಚಿತ್ರ ರಂಗದ ಸಾಧನೆ ನಿಜಕ್ಕೂ ಶ್ಲಾಘನೀಯ ರಾಷ್ಟ್ರಪ್ರಶಸ್ತಿ ಇವರಲ್ಲಿ ಮತ್ತಷ್ಟು ಉತ್ತಮ ಚಿತ್ರಗಳ ನಿಮಾ೯ಣ, ನಿದೇ೯ಶನಕ್ಕೆ ಸ್ಪೂತಿ೯ಯಾಗಲಿ ಎಂದು ಯದುವೀರ್ ಆಶಯ
ರಾಷ್ಟ್ರಪ್ರಶಸ್ತಿ ಪಡೆದ ನಿಮಾ೯ಪಕಿ, ನಿದೇ೯ಶಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಮಾತನಾಡಿ, ನಿರೀಕ್ಷಿಸಿಯೇ ಇರದ ರಾಷ್ಟ್ರಪ್ರಶಸ್ತಿಯನ್ನು ಕಂದೀಲು ಚಿತ್ರಕ್ಕಾಗಿ ಪಡೆದದ್ದು ತನ್ನ ಪುಣ್ಯ. ತನ್ನ ಸಿನಿಮಾ ರಂಗದ ಹಾದಿಯಲ್ಲಿ ನೆರವು ನೀಡಿದ ಕೊಡಗಿನ ಹಿತೈಷಿಗಳಿಗೆ ಸದಾ ಅಭಾರಿ ಎಂದರಲ್ಲದೇ ಕಂದೀಲು ಚಿತ್ರತಂಡದ ಪರಿಶ್ರಮವೇ ಈ ಪ್ರಶಸ್ತಿ ದೊರಕಲು ಕಾರಣವಾಗಿದ್ದರಿಂದ ಪ್ರಶಸ್ತಿಯನ್ನು ಚಿತ್ರತಂಡಕ್ಕೆ ಅಪಿ೯ಸುವುದಾಗಿ ನುಡಿದರು.
ಕಂದೀಲು ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಮಡಿಕೇರಿಯ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರನ್ನು ಕೊಡಗು ಪತ್ರಕತ೯ರ ಸಂಘದ ವತಿಯಿಂದ ಆಯೋಜಿತ ಕಾಯ೯ಕ್ರಮದಲ್ಲಿ ಸಂಸದ ಯದುವೀರ್ ಒಡೆಯರ್ ಸನ್ಮಾನಿಸಿ ಗೌರವಿಸಿದರು.
ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್. ಟಿ. ಮಾತನಾಡಿ, 2023 ನೇ ಸಾಲಿಗಾಗಿ 71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಕೊಡಗಿನ ನಿದೇ೯ಶಕಿಯ ಕಂದೀಲು ಚಿತ್ರ ಆಯ್ಕೆಯಾಗಿರುವುದು ಕೊಡಗಿನ ಕಲಾಪ್ರೇಮಿಗಳಿಗೆ ಹೆಮ್ಮೆ ತರುವ ವಿಚಾರವಾಗಿದೆ. ಕೊಡಗಿನ ಜನತೆಯ ಪರವಾಗಿ ಕೊಡಗು ಪತ್ರಕತ೯ರ ಸಂಘ ಪ್ರಶಸ್ತಿ ವಿಜೇತರನ್ನು ಅಭಿನಂದಿಸುತ್ತಿದೆ ತವರಿನ ಸನ್ಮಾನದಂತೆ ಈ ಗೌರವಾಪ೯ಣೆ ಮಾಡುತ್ತಿರುವುದಾಗಿ ಎಂದರು. ಕೊಡಗಿನ ನಿಸಗ೯ಸಿರಿ ಯಶೋಧ ಅವರಿಗೆ ಮತ್ತಷ್ಟು ಉತ್ತಮ ಚಿತ್ರಗಳನ್ನು ನಿಮಿ೯ಸುವಲ್ಲಿ ಪ್ರೇರಣೆಯಾಗಲಿ ಎಂದೂ ಅನಿಲ್ ಹಾರೈಸಿದರು.
ಕೊಡಗು ಪತ್ರಕತ೯ರ ಸಂಘದ ಪ್ರಧಾನ ಕಾಯ೯ದಶಿ೯ ಸುರೇಶ್ ಬಿಳಿಗೇರಿ, ಹಿರಿಯ ಕಲಾವಿದ, ಪತ್ರಕತ೯ ಜಿ.ಚಿದ್ವಿಲಾಸ್ , ಕೊಟ್ಟುಕತ್ತೀರ ಪ್ರಕಾಶ್ ಹಾಜರಿದ್ದರು.








