ಜನವಾಹಿನಿ NEWS ಸೋಮವಾರಪೇಟೆ : ಇಲ್ಲಿನ ಒಕ್ಕಲಿಗರ ಸೌಹಾರ್ಧ ಸಹಕಾರಿ ಸಂಘದ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆ ಸಮೀಪದ ಒಕ್ಕಲಿಗರ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷ ಬಿ.ಜೆ.ದೀಪಕ್ ಅವರ ನೇತೃತ್ವದ ಶನಿವಾರ ನಡೆಯಿತು.
ದೀಪಕ್ ಮಾತನಾಡಿ, ಸಹಕಾರಿ ಸಂಘದಲ್ಲಿ ಇವರೆಗೆ ಒಟ್ಟು ೩೩೯ ಸದಸ್ಯರಿದ್ದಾರೆ. ೨೦೨೪-೨೫ನೇ ಸಾಲಿನಲ್ಲಿ ಸಂಘವು ಒಟ್ಟು ೪,೧೯,೧೧೯ ರೂ ಲಾಭಗಳಿಸಿದೆ ಎಂದರು. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗಗಳಿಗೆ ತೆರಳಿ ಸದಸ್ಯತ್ವ ಅಭಿಯಾನ ನಡೆಸಲಾಗುವುದರೊಂದಿಗೆ ಸದಸ್ಯರನ್ನ ಹೆಚ್ಚಿಸುವ ಕೆಲಸ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಮಾತನಾಡಿ, ರಾಜ್ಯ ಸರ್ಕಾರದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಗಣತಿಯು ಇದೆ ತಿಂಗಳು ೨೩ ರಿಂದ ನಡೆಯಲಿದೆ. ಒಕ್ಕಲಿಗರಲ್ಲಿ ಜಾತಿ ಸಮೀಕ್ಷೆ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ಸಭೆ ನಡೆಸಲಾಗುವುದು.ನಿಮ್ಮ ನೈಜ ಸ್ಥಿತಿಯನ್ನ ತಿಳಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಕೆ.ಬಿ.ಸುರೇಶ, ನಿರ್ದೇಶಕರುಗಳಾದ ಪಿ.ಕೆ.ರವಿ, ಗಿರೀಶ್ ಮಲ್ಲಪ್ಪ, ಎಚ್.ಎಸ್. ವಸಂತಕುಮಾರ್, ಎಚ್.ಎಂ.ನತೀಶ್ ಮಂದಣ್ಣ, ಎಚ್.ಕೆ.ಪ್ರಸ್ಸಿ, ಜಿ. ಪಿ. ಕಿಶೋರ್ ಕುಮಾರ್, ಲೋಕೇಶ್ವರಿ ಗೋಪಾಲ್, ಯು.ಎಲ್.ಸುಮಲತ, ಸಿ.ಇ.ಒ., ಕೆ.ಟಿ. ದಯಾನಂದ, ಆಂತರಿಕ ಲೆಕ್ಕ ಪರಿಶೋದಕ ಕೆ.ಎಲ್.ವಿಜೇತ್ ಇದ್ದರು.








