ವಾಹನ ಸವಾರರೇ ಎಚ್ಚರ…! ಇನ್ಮುಂದೆ ನಿಯಮ ಉಲ್ಲಂಘಿಸಿದರೆ ಬೀಳಲಿದೆ ದಂಡ..
ಸಿದ್ದಾಪುರ : ಅಪರಾಧ ಪ್ರಕರಣಗಳು ಸೇರಿದಂತೆ ನಿಯಮ ಉಲ್ಲಂಘಿಸಿ ವಾಹನ ಚಾಲನೆ ಮಾಡುವವರ ಮೇಲೆ ನಿಗಾ ವಹಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸಿದ್ದಾಪುರ ಪಟ್ಟಣದ ಮಧ್ಯೆ ಇರುವ ವೃತ್ತದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಇನ್ನೂ ಮುಂದೆ ಎಲ್ಮೆಟ್ ಹಾಕದ ಬೈಕ್ ಸವಾರರು ಹಾಗೂ ಸೀಟ್ ಬೆಲ್ಟ್ ಹಾಕದೆ ವಾಹನ ಚಲಾಯಿಸುವ ಚಾಲಕರಿಗೆ ಅಂಚೆ ಮುಖಾಂತರ ದಂಡದ ನೋಟಿಸ್ ರವಾನೆ ಆಗಲಿದೆ ಎಂದು ಸಿದ್ದಾಪುರ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
✒️ ಸುರೇಶ್ ಪೂಜಾರಿ ಗುಹ್ಯ








