ವಿಶ್ವ ಸ್ತನ್ಯಪಾನ ಸಪ್ತಾಹ ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಎದೆಹಾಲು ಸಹಕಾರಿ: ಡಾ.ಮಧುಸೂದನ
ಮಡಿಕೇರಿ : ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಆರು ತಿಂಗಳ ವರೆಗೆ ಕಡ್ಡಾಯವಾಗಿ ಎದೆಹಾಲು ಕುಡಿಸಬೇಕು. ಜೊತೆಗೆ 2 ವರ್ಷದವರೆಗೆ ಪೂರಕ ಆಹಾರದ ಜೊತೆಗೆ ಎದೆಹಾಲು ಕುಡಿಸುವಂತಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್‍ಸಿಎಚ್ ಅಧಿಕಾರಿ ಡಾ.ಮಧುಸೂದನ್ ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಮಕ್ಕಳ ವಿಭಾಗದಿಂದ ನಗರದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯ ಮಕ್ಕಳ ಹೊರ ರೋಗಿ ವಿಭಾಗದಲ್ಲಿ ಬುಧವಾರ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಎದೆಹಾಲಿನ ಮಹತ್ವ ಕುರಿತು ಆಗಸ್ಟ್, 01 ರಿಂದ 07 ರವರೆಗೆ ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ. ಎದೆ ಹಾಲಿನ ಮಹತ್ವ ಬಗ್ಗೆ ಹೆಚ್ಚಿನ ಅರಿವು ಮೂಡಿಸಿದರು ಸಹ ಮೂಡನಂಬಿಕೆಗೆ ಒಳಗಾಗುವುದು ತಪ್ಪುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಕ್ಕಳ ಬೆಳವಣಿಗೆಗೆ ಎದೆ ಹಾಲು ಅತ್ಯಮೂಲ್ಯವಾಗಿದೆ. ಎದೆ ಹಾಲಿನ ಮಹತ್ವ ಕುರಿತು ಸ್ಪರ್ಧಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ 6 ತಿಂಗಳ ಒಳಗಿನ ಮಕ್ಕಳಿಗೆ ನಾಟಿ ಔಷಧಿ ಸೊಪ್ಪಿನ ರಸ ಕುಡಿಸಿ ಉಸಿರಾಟದ ತೊಂದರೆಯಾಗಿ ಸಾವನ್ನಪ್ಪುತ್ತಿರುವುದು ಕಂಡುಬರುತ್ತಿದೆ ಎಂದು ಡಾ.ಮಧುಸೂದನ ಅವರು ಮಾಹಿತಿ ನೀಡಿದರು.
ಕಳೆದ ಮೂರು ತಿಂಗಳಲ್ಲಿ ಒಂದು ವರ್ಷದೊಳಗಿನ 31 ಮಕ್ಕಳು ವಿವಿಧ ಕಾರಣಗಳಿಂದ ಸಾವನಪ್ಪಿರುವುದು ಕಂಡು ಬಂದಿದೆ ಎಂದು ಡಾ.ಮಧುಸೂದನ ವಿವರಿಸಿದರು.
ಕಾಂಗಾರು ಮದರ್ ಕೇರ್ ಬಗ್ಗೆ ಮಾಹಿತಿ ನೀಡಿ ಆರು ತಿಂಗಳವರೆಗೆ ಎದೆ ಹಾಲನ್ನು ಮಾತ್ರವೇ ಕುಡಿಸಿ ಮತ್ತು ಎರಡು ವರ್ಷದವರೆಗೆ ಪೂರಕ ಆಹಾರದೊಂದಿಗೆ ಎದೆ ಹಾಲನ್ನು ಮುಂದುವರಿಸಿ, ಇದರಿಂದ ಅಪೌಷ್ಟಿಕತೆ ನಿಮೋನಿಯಾ ಅತಿಸಾರ ಬೇಧಿ ತಡೆಗಟ್ಟುವಲ್ಲಿ ಹೆಚ್ಚಿನ ಪಾತ್ರ ವಹಿಸುತ್ತದೆ ಎಂಬ ಜ್ಞಾನಿಕ ಮಾಹಿತಿಯನ್ನು ನೀಡಿದರು.
ನವಜಾತ ಶಿಶು ಮರಣ, ಶಿಶು ಮರಣ, ಚಿಕ್ಕ ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಸ್ತನ್ಯಪಾನವು ಮಹತ್ತರವಾದ ಪಾತ್ರವಹಿಸುತ್ತದೆ ಎಂದು ತಿಳಿಸಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ಪುರುಷೋತ್ತಮ ಅವರು ಮಾತನಾಡಿ ಎದೆಹಾಲು ಉಣಿಸುವುದು ಒಂದು ಸಹಜ ಪ್ರಕ್ರಿಯೆಯಾಗಿದ್ದರೂ ಸಾಂಸ್ಥಿಕ ಹೆರಿಗೆಗಳು ಜಾಸ್ತಿ ಆಗುತ್ತಿದ್ದರು ಎದೆಹಾಲು ಕುಡಿಸುವವರ ಪ್ರಮಾಣ ಕಡಿಮೆಯಾಗುತ್ತಿದೆ ಎಂದರು.
ತಾಯಿಯ ಹಾಲು ಅಮೃತಕ್ಕೆ ಸಮಾನ ಅದೇ ಅಮೃತ ಸಮಾನವಾದ ಸ್ತನ್ಯಪಾನವನ್ನು ಮಾತೆಯರು ಸರಿ ಪ್ರಮಾಣದಲ್ಲಿ ಸರಿಯಾದ ರೀತಿಯಲ್ಲಿ ಸ್ತನ್ಯಪಾನ ಮಾಡಿಸಬೇಕು ಎಂದರು.
ತಾಯಿಯ ಹಾಲಿನ ಮಹತ್ವವನ್ನು ಎತ್ತಿ ತೋರಿಸುವ ಸದುದ್ದೇಶವಾಗಿದೆ. ತಾಯಿಯ ಹಾಲನ್ನು ರಕ್ಷಿಸಿ ಪೆÇ್ರೀತ್ಸಾಹಿಸಲು ಬೆಂಬಲಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ತಾಯಿಯು ತನ್ನ ಇಚ್ಛೆಯಂತೆ ಎದೆ ಹಾಲುಣಿಸಲು ಅಗತ್ಯವಾದ ಸಮಗ್ರ ಮಾಹಿತಿಯನ್ನು ವೈದ್ಯಕೀಯ ವಿದ್ಯಾರ್ಥಿಗಳು ನಾಟಕ ಪ್ರದರ್ಶನದ ಮುಖಾಂತರ ಮಾಹಿತಿಯನ್ನು ರವಾನಿಸಿದರು.
ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಎಲ್ಲ ವಿಭಾಗದ ವೈದ್ಯಕೀಯ ವಿದ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಕವನ ಸ್ಪರ್ಧೆಯನ್ನು ಏರ್ಪಡಿಸಿ ಮಕ್ಕಳ ವಿಭಾಗದ ವತಿಯಿಂದ ಬಹುಮಾನವನ್ನು ವಿತರಿಸಲಾಯಿತು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಸ್ವಾಗತಿಸಿ, ನಿರೂಪಿಸಿದರು. ಶುಶ್ರೂಷಕ ಅಧಿಕ್ಷಕರಾದ ವೀಣಾ, ಅಸೋಸಿಯೇಟ್ ಪೆÇ್ರಫೆಸರ್ ಶ್ರೀ ಗುರುಪಾದ, ತಾಲೂಕು ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸುಮತಿ, ಕೇರ್ ಕಂಪನಿಯನ್ ಪೆÇ್ರೀಗ್ರಾಮ್ ವತಿಯಿಂದ ನಾಗೇಶ್ ಮತ್ತು ಪ್ರಶಾಂತ್, ಆರೋಗ್ಯ ಇಲಾಖೆಯ ಮತ್ತು ಮಕ್ಕಳ ವಿಭಾಗದ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.








