ವೀರಾಜಪೇಟೆ ಲಯನ್ಸ್ ಕ್ಲಬ್ ಗೆ ಆಯ್ಕೆ
ವಿರಾಜಪೇಟೆ : ವಿರಾಜಪೇಟೆ ಲಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ವಕೀಲ ಅಂಬಿ ಕೃಷ್ಣಮೂರ್ತಿ ಹಾಗೂ ಕಾರ್ಯದರ್ಶಿ ಯಾಗಿ ವೀರಾಜಪೇಟೆ ಟೆರೆಷಿಯನ್ ಡಿಜಿಟಲ್ ಪ್ರಿಂಟಿಂಗ್ ಪ್ರೆಸ್ ಮಾಲೀಕರಾದ ಪೌಲ್ ಕ್ಷೇವಿಯರ್ ಆಯ್ಕೆಯಾಗಿದ್ದಾರೆ.
2025-26 ನೇ ಸಾಲಿನಲ್ಲಿ ವೀರಾಜಪೇಟೆ ಲಯನ್ಸ್ ಸಂಸ್ಥೆ ಸುವರ್ಣ ಮಹೋತ್ಸವ ಆಚರಿಸುತ್ತಿದ್ದು ಖಜಾಂಚಿಯಾಗಿ ಮಂಡೇಟಿರ ಸುರೇಶ್, ಉಪಾಧ್ಯಕ್ಷರಾಗಿ ಪಿ.ಪಿ.ಸುಬ್ಬಯ್ಯ, ಅಜಿತ್ ಎ.ಎ. ಹಾಗೂ ಕೆ.ಪಿ.ನಿಯಾಸ್ ಮತ್ತು ನಿರ್ದೇಶಕರಾಗಿ ಕೆ.ಆರ್.ಮೋಹನ್ ರೈ, ಕೆ.ಎಂ.ರಘು ಸೋಮಯ್ಯ, ಎ.ಪಿ.ಪ್ರಸನ್ನ,ಎ.ಪಿ.ಸುಬ್ರಮಣಿ ಸಿ.ಗಿಲ್ ಸೋಮಯ್ಯ ಹಾಗೂ ಪ್ರತಾಪ್ ಚಿಣ್ಣಪ್ಪ ಆಯ್ಕೆಯಾಗಿರುತ್ತಾರೆ.








