ಶಾಲಾ ಆವರಣ ಸ್ವಚ್ಛಗೊಳಿಸಿ ರಸ್ತೆ ಗುಂಡಿ ಮುಚ್ಚಿದ ನೇತಾಜಿ ಯುವಕ ಸಂಘ : ಹಲವರಿಂದ ಪ್ರಶಂಸೆ
ಸಿದ್ದಾಪುರ : ನೇತಾಜಿ ಯುವಕ ಸಂಘ ವತಿಯಿಂದ ಗುಹ್ಯ ಶಾಲೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.
ಶ್ರಮದಾನದ ಮೂಲಕ ಶಾಲೆಯ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿದ ಸಂಘದ ಸದಸ್ಯರು ಇದೇ ಸಂದರ್ಭ ಸಮೀಪದ ರಸ್ತೆಯಲ್ಲಿದ್ದ ಗುಂಡಿಗಳನ್ನು ಮಣ್ಣು ಹಾಕಿ ಮುಚ್ಚಿದ್ದಾರೆ. ಸಂಘದ ಕಾರ್ಯಕ್ಕೆ ಹಲವರು ಶ್ಲಾಘನೆ ವ್ಯಕ್ತಪಡಿಸಿದ್ದು, ಸಾಮಾಜಿಕ ಕಾರ್ಯ ಹೀಗೆ ಮುಂದುವರೆಯಲಿ ಎಂದು ಹಾರೈಸಿದ್ದಾರೆ.









