Breaking News :

ಶಾಸಕ ಪೊನ್ನಣ್ಣರವರನ್ನು ಮಂತ್ರಿ ಮಾಡಬೇಕೆಂದು ಕೊಡಗು ಅರೆಭಾಷೆ ಗೌಡ ಸಮಾಜದ ಪ್ರಮುಖರಿಂದ ಮುಖ್ಯಮಂತ್ರಿಗೆ ಮನವಿ

ಶಾಸಕ ಪೊನ್ನಣ್ಣರವರನ್ನು ಮಂತ್ರಿ ಮಾಡಬೇಕೆಂದು ಕೊಡಗು ಅರೆಭಾಷೆ ಗೌಡ ಸಮಾಜದ ಪ್ರಮುಖರಿಂದ ಮುಖ್ಯಮಂತ್ರಿಗೆ ಮನವಿ

ಮಡಿಕೇರಿ : ಅರೆಭಾಷೆ ಗೌಡ ಸಮುದಾಯದ ಹಲವು ಬೇಡಿಕೆಗಳನ್ನೊಳಗೊಂಡ ಮನವಿಯೊಂದಿಗೆ, ಸಮಾಜದ ಪ್ರಮುಖರು ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ ರವರ ನೇತೃತ್ವದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು, ಅವರ ನಿವಾಸದಲ್ಲಿ ಭೇಟಿಯಾದರು.

ಈ ಸಂದರ್ಭ ಪ್ರಮುಖ ಬೇಡಿಕೆಯಾಗಿ ಮಾನ್ಯ ಪೊನ್ನಣ್ಣ ರವರನ್ನು ಮುಂದಿನ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಪ್ರಮುಖ ಖಾತೆಯೊಂದಿಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡಬೇಕೆಂಬ ಮನವಿಯನ್ನು ಸಲ್ಲಿಸಿದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ಅರೆ ಭಾಷೆ ಗೌಡ ಸಮಾಜದ ಪ್ರಮುಖರಾದ ಸೂರ್ತಲೆ ಸೋಮಣ್ಣ, ಮೋಹನ್ ದಾಸ್, ನವೀನ್, ಗಿರೀಶ್, ಸಂದೀಪ್, ಪರ್ಮಲೆ. ಗಣೇಶ್. ಪಿ ಎಲ್ ಸುರೇಶ್. ದಂಬೆ ಕೊಡಿ ಭೀಷ್ಮ ಪಟ್ಟಡ ದೀಪಕ್ ಬಂಗಾರ ಕೊಡಿ ತುಳಸಿ ಗಾಂಧಿ ಪ್ರಸಾದ್ ಪೆರು ಮುಂಡ ರೋಹಿಣಿ ಜಯರಾಮ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

Share this article

ಟಾಪ್ ನ್ಯೂಸ್

More News