ಸಮಾಜದ ಅಭಿವೃದ್ಧಿಗೆ ಬಿಲ್ಲವ ಸಮಾಜದವರ ಕೊಡುಗೆ ವಿಶಿಷ್ಟ : ಎ. ಎಸ್.ಪೊನ್ನಣ್ಣ
ನಾಪೋಕ್ಲು : ಬಿಲ್ಲವ ಸಮಾಜದವರು ಅವರದೇ ಆದ ವಿಶಿಷ್ಟ ರೀತಿಯಲ್ಲಿ ಸಮಾಜದ ಅಭಿವೃದ್ಧಿಗೆ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ ಎಂದು ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ತಿಳಿಸಿದ್ದಾರೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲೂಕಿನ ನಾಪೋಕ್ಲು ಕೊಡವ ಸಮಾಜದಲ್ಲಿ ಬಿಲ್ಲವ ಸಮಾಜದ ವಾರ್ಷಿಕೋತ್ಸವ ಅಂಗವಾಗಿ ಆಯೋಜನೆಗೊಂಡಿದ್ದ ಬೃಹತ್ ರಕ್ತದಾನ ಶಿಬಿರ, ಸಮಾಜದ ಮಹಾಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡ ಆಟಿಡೊಂಜಿ ದಿನ 2025 ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು
ಎಲ್ಲರಿಗೂ ಆದರ್ಶಪ್ರಾಯರಾದ ಸಮಾಜ ಸುಧಾರಕ ಶ್ರೀ ನಾರಾಯಣ ಗುರುರವರ ಹಿಂಬಾಲಕರಾದ ಬಿಲ್ಲವ ಸಮಾಜದವರು, ಸಮಾಜದ ಎಲ್ಲಾ ಆಯಾಮಗಳಲ್ಲಿ ಮುನ್ನಲೆಗೆ ಬರಬೇಕೆಂದು ಕರೆ ನೀಡಿದ ಅವರು ಅತ್ಯಂತ ಶ್ರಮಜೀವಿಗಳು ಹಾಗು ಸ್ವಾಭಿಮಾನಿಗಳಾದ ಬಿಲ್ಲವ ಸಮಾಜದವರ ಕಾರ್ಯಕ್ರಮಕ್ಕೆ ತನ್ನನು ಆಮಂತ್ರಿಸಿದ್ದು ಅತ್ಯಂತ ಹೆಮ್ಮೆ ಎಂದು ಬಣ್ಣಿಸಿದರು.
ಸಮುದಾಯ ಬಾಂಧವರಿಂದ ಸಮಾಜದ ಅಭಿವೃದ್ಧಿಗೆ ಯಾವುದೇ ಬೇಡಿಕೆ ಇದ್ದರೂ ಅದಕ್ಕೆ ಸ್ಪಂದಿಸಲು ತಾನು ಸದಾ ಸಿದ್ಧ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಿಲ್ಲವ ಸಮಾಜದ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು, ನಾಪೋಕ್ಲು ಪಂಚಾಯಿತಿ ಅಧ್ಯಕ್ಷರಾದ ವನಜಾಕ್ಷಿ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಸ್ಮಾಯಿಲ್, ಬಿಜೆಪಿ ಹಿಂದುಳಿದ ವರ್ಗಗಳ ಅಧ್ಯಕ್ಷ ಅಪ್ಪು ರವೀಂದ್ರ, ಕೆಡಿಪಿ ಸದಸ್ಯರಾದ ಬಾಚಮಂಡ ಲವ ಚಿಣ್ಣಪ್ಪ, ಕಕ್ಕಬೆ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕಲಿಯಂಡ ಸಂಪನ್ ಅಯ್ಯಪ್ಪ, ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹಂಸ, ಡಿಸಿಸಿ ಉಪಾಧ್ಯಕ್ಷರು ಅಬ್ದುಲ್ ರೆಹಮಾನ್, ಗಿರೀಶ್ ಶೇರಿ, ಸಬಾ ತಿಮ್ಮಯ್ಯ, ಅರುಣ್ ದೇಬ, ಮುತ್ತಪ್ಪ, ದಯಾ ಚಿನ್ನಪ್ಪ, ಮಚುರ ರವಿ, ವಾಸಿಮ್, ಬಿಲ್ಲವ ಸಮಾಜದ ಸದಸ್ಯರು ಹಾಗೂ ಪ್ರಮುಖರುಉಪಸ್ಥಿತರಿದ್ದರು.








