ಕೇಸರಿ ಶಲ್ಯ, ಸಾಂಪ್ರದಾಯಿಕ ಉಡುಗೆ ತೊಟ್ಟು ಕಳಸ ಹೊತ್ತು ಮೆರವಣಿಗೆಯಲ್ಲಿ ಸಾಗಿದ ಹಿಂದೂ ಬಾಂಧವರು
ಜನವಾಹಿನಿ News ಸಿದ್ದಾಪುರ : ಸಂಘರ್ಷದ ಹಾದಿಯಲ್ಲಿರುವ ಇಂದಿನ ಜಗತ್ತಿನಲ್ಲಿ ಶಾಂತಿ, ಸಹಬಾಳ್ವೆ ನೆಲೆಸಬೇಕೆಂದರೆ ಶಾಂತಿ ಸೌಹಾರ್ದತೆಗೆ ಹೆಚ್ಚಿನ ಮಹತ್ವವನ್ನು ನೀಡುವ ,(ವಸುಧೈವ ಕುಟುಂಬಕಂ) ತತ್ವವನ್ನು ಸಾರುವ ಸನಾತನ ಧರ್ಮ (ಹಿಂದೂ ಧರ್ಮದ) ತತ್ವ ಸಿದ್ಧಾಂತಗಳ ಅಗತ್ಯತೆ ಇಡಿ ವಿಶ್ವಕ್ಕೆಬೇಕಿದೆ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಂಚಾಲಕ ಮಹೇಶ್ ಕಡಗದಾಳು ಹೇಳಿದರು.
ಹಿಂದೂ ಸಂಗಮ ಯೋಜನಾ ಸಮಿತಿ ವಿರಾಜಪೇಟೆ ತಾಲೂಕು ಸಿದ್ದಾಪುರ ಮಂಡಲ ವತಿಯಿಂದ ಸಿದ್ದಾಪುರದ ಸ್ವರ್ಣ ಮಾಲಾ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಸಭಾ ಕಾರ್ಯಕರ್ಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈವರೆಗೂ ಹಿಂದೂ ಸಂಗಮ ಕಾರ್ಯಕ್ರಮಗಳಿಂದ ಯಾವುದೇ ಅಹಿತಕ ಘಟನೆ ನಡೆಯದಿದ್ದರೂ, ಯಾರನ್ನೋ ಓಲೈಕೆ ಮಾಡುವ ಸಲುವಾಗಿ ಹಿಂದೂ ಸಂಗಮ ಯಾತ್ರೆಯನ್ನು ತಡೆಯುವ ಯತ್ನವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದ ಅವರು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಶತಾಬಿ ಅಂಗವಾಗಿ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲೂ ಹಿಂದೂ ಸಂಗಮ ನಡೆಯುತ್ತಿದೆ. ಆದರೆ ಹಿಂದೂ ಸಂಗಮವನ್ನು ತಡೆಯುವ ಯತ್ನ ನಡೆಯುತ್ತಿದೆ. ಹಿಂದುಗಳನ್ನು ಜಾತಿಗಳ ಹೆಸರಿನಲ್ಲಿ ಬೇರ್ಪಡಿಸುವ ಮೂಲಕ ಹಿಂದುಗಳ ಒಗ್ಗಟ್ಟನ್ನು ಛಿದ್ರಗೊಳಿಸುವ ಷಡ್ಯಂತರಕ್ಕೆ ಹಿಂದೂಗಳು ಬಲಿಯಾಗುತ್ತಿದ್ದಾರೆ. ಹಿಂದೂ ಸಮಾಜ ಒಗ್ಗಟ್ಟಾಗಬೇಕು ಎಂದರು.
ಸೇವಾ ಭಾರತೀಯ ಜಿಲ್ಲಾ ಸಂಚಾಲಕರಾದ ಟಿ.ಸಿ ಚಂದ್ರನ್ ಮಾತನಾಡಿ, ಹಿಂದೂಗಳಲ್ಲಿ ಹಿಂದುತ್ವ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಪ್ರತಿ ಮಂಡಲಗಳಲ್ಲಿ ಹಿಂದೂ ಸಂಗಮ ಆಯೋಜಿಸಲಾಗುತ್ತಿದೆ. ಹಿಂದೂಗಳು ಒಗ್ಗಟ್ಟಾಗಿ ಸದೃಢ ಭಾರತವನ್ನು ಕಟ್ಟಬೇಕು ಎಂದರು.

ಪೊನ್ನಂಪೇಟೆ ಶಾರದಾಶ್ರಮದ ಭೂನಾಥ ನಂದ ಸ್ವಾಮೀಜಿ ತಾಯಿ ಭಾರತಾಂಬೆಯ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಹಾಗೂ ಹಿಂದೂ ಸಂಗಮ ಯೋಜನಾ ಸಮಿತಿ ಸಂಚಾಲಕ ರೂಪೇಶ್ ಸಹ ಸಂಚಾಲಕ ಡಿಜಿತ್, ಪ್ರಮುಖರಾದ ಸುರೇಶ್ ನೆಲ್ಲಿಕಲ್, ಅನಿಲ್, ಸುಬ್ರಮಣಿ, ಗುರುದರ್ಶನ್ ಸೇರಿದಂತೆ ವಿವಿಧ ಹಿಂದೂ ದೇವಾಲಯಗಳ ಪ್ರತಿನಿಧಿಗಳು ಭಾಗವಹಿಸಿದರು.
ಹಿಂದೂಸಂಗಮ ಕಾರ್ಯಕ್ರಮದ ಅಂಗವಾಗಿ ಕೇಸರಿ ಶಲ್ಯ, ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರು ಕಳಶ ಹಿಡಿದು ಸಾಗಿದರೆ, ವಿರಾಜಪೇಟೆ ನಾಟ್ಯಾಂಜಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಆಕರ್ಷಣೀಯ ಭಜನೆಕುಣಿತ ಹಾಗೂ ಮಾಲ್ದಾರೆ ಚಂಡೆ ಮೇಳಗಳೊಂದಿಗೆ ಸಿದ್ದಾಪುರದ ಶ್ರೀ ಅಯ್ಯಪ್ಪ ದೇವಸ್ಥಾನದ ಬಳಿಯಿಂದ ಮುಖ್ಯ ರಸ್ತೆಯ ಮೂಲಕ ಬಸ್ ನಿಲ್ದಾಣ ತಲುಪಿ ಅಲ್ಲಿಂದ ಸ್ವರ್ಣಮಾಲ ಮಂಟಪದ ವರೆಗೆ ಮೆರವಣಿಗೆ ನಡೆಸಲಾಯಿತು. ಸಿದ್ದಾಪುರ ಸುತ್ತಮುತ್ತಲ ಭಾಗದ ಹಿಂದೂ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿರಾಜಪೇಟೆ ರೋಟರಿ ಪ್ರಿನ್ಸಿಪಾಲ್ ವಿಶಾಲಾಕ್ಷಿ ಕಾರ್ಯಕ್ರಮವನ್ನು ನಿರೂಪಿಸಿದರೆ, ಸುರೇಶ್ ಸ್ವಾಗತಿಸಿ ಡಿಜಿತ್ ವಂದಿಸಿದರು.
*********************
ವಿರಾಜಪೇಟೆ ತಾಲೂಕು, ಸಿದ್ದಾಪುರ ಮಂಡಲ ವತಿಯಿಂದ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮ ಸಮಸ್ತ ಹಿಂದೂ ಬಾಂಧವರ ಸಹಕಾರ ಬೆಂಬಲದಿಂದ ನಿರೀಕ್ಷೆಗೂ ಮೀರಿ ಅತ್ಯಂತ ಯಶಸ್ವಿಯಾಗಿದೆ. ಮುಂದೆಕೂಡ ಎಲ್ಲಾರು ಇದೆ ರೀತಿಯಲ್ಲಿ ಮುಂದುವರೆಯುವ ಮೂಲಕ ಸನಾತನ ಧರ್ಮ ರಕ್ಷಣೆಯ ಜತೆಗೆ ಪ್ರತಿಯೊಬ್ಬರ ಸಮಸ್ಯೆಗೆ ಸ್ಪಂದಿಸುವ ಕಾರ್ಯವಾಗಬೇಕಿದೆ.
ರೂಪೇಶ್, ಹಿಂದೂ ಸಂಗಮ ಆಯೋಜನಾ ಸಮಿತಿ ಸಿದ್ದಾಪುರ ಮಂಡಲ








