Breaking News :

ಸಿದ್ದಾಪುರ ಕರಡಿಗೋಡು ವ್ಯಾಪ್ತಿಯಿಂದ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ಯಶಸ್ವಿ


ಸಿದ್ದಾಪುರ ಕರಡಿಗೋಡು ವ್ಯಾಪ್ತಿಯಿಂದ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ಯಶಸ್ವಿ


ಸಿದ್ದಾಪುರ : ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಮರಳಿ ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ಉಪವಲಯ ಅರಣ್ಯಾಧಿಕಾರಿ ಶಿವರಾಂ ನೇತೃತ್ವದಲ್ಲಿ ನಡೆಯಿತು

ವಿರಾಜಪೇಟೆ ಅರಣ್ಯ ವಲಯದ ಕರಡಿಗೋಡು, ಸುತ್ತಮುತ್ತಲಿನ ಗ್ರಾಮದಲ್ಲಿ ಉಪಟಳ ನೀಡುತಿರುವ ಕಾಡನೆಗಳನ್ನು ಮರಳಿ ಅರಣ್ಯಕ್ಕಟ್ಟಲು ಮುಂದಾದ ಇಲಾಖೆಯ ಸಿಬ್ಬಂದಿಗಳು ಇಂದು ಮುಂಜಾನೆಯಿಂದ ಕಾರ್ಯ ಪ್ರವೃತರಾಗಿ ಪಟಾಕಿ ಸಿಡಿಸಿ ಕರಡಿಗೋಡು ಗ್ರಾಮದಿಂದ ಆನೆಗಳನ್ನು ಅವರೆಗುಂದ ಭಾಗದ ಅರಣ್ಯಕ್ಕೆ ಅಟ್ಟಿಸುವಲ್ಲಿ ಯಶಸ್ವಿಯಾದರು.

ಈ ಸಂದರ್ಭದಲ್ಲಿ ಆರ್.ಆರ್.ಟಿ ತಂಡ ಹಾಗೂ ತಿತಿಮತಿ ಮತ್ತು ವಿರಾಜಪೇಟೆ ಇ ಟಿ ಎಫ್ ಭಾಗವಹಿಸಿದ್ದರು.

 

 

Share this article

ಟಾಪ್ ನ್ಯೂಸ್

More News