Breaking News :

ಸಿದ್ದಾಪುರ : ಚುರುಕುಗೊಂಡ ರಸ್ತೆ ಕಾಮಗಾರಿ – ಭರದಿಂದ ಸಾಗುತ್ತಿರುವ ಡಾಂಬರೀಕರಣ :  ನಿಟ್ಟುಸಿರುಬಿಟ್ಟ ಜನತೆ

 


ಜನವಾಹಿನಿ News ಸಿದ್ದಾಪುರ : ವರ್ಷದ ಹಿಂದೆ ಪ್ರಾರಂಭವಾದ ಸಿದ್ದಾಪುರ – ವಿರಾಜಪೇಟೆ ನಡುವಿನ ಕೊಣನೂರು ಮಾಕುಟ್ಟ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿಯೂ ಹಲವು ದಿನಗಳಿಂದ ಮಳೆ ಮತ್ತು ಇನ್ನಿತರ ಕಾರಣಗಳಿಂದ ಆಮೆ ಗತಿಯಲ್ಲಿ ಸಾಗುತ್ತಿತ್ತು. ಆದರೆ ವರ್ಷದ ಬಳಿಕ ಇದೀಗ ರಸ್ತೆ ಕಾಮಗಾರಿ ಚುರುಕುಗೊಂಡಿದ್ದು, ಡಾಂಬರೀಕರಣ ಭರದಿಂದ ಸಾಗುತ್ತಿದೆ. ಇದರಿಂದಾಗಿ ಕೆಸರು , ವಿಪರೀತ ಧೂಳು, ಸಂಚಾರ ದಟ್ಟಣೆ ಹೀಗೆ ಹಲವು ರೀತಿಯ ತೊಂದರೆ ಅನುಭವಿಸುತ್ತಿದ್ದ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ವಾಹನ ಸವಾರರು ನಿಟ್ಟುಸಿರು ಬಿಟ್ಟಂತಾಗಿದೆ.
ಕಾಮಗಾರಿಯ ವೇಗ ಕಂಡು ವಾಹನ ಸವಾರರು ಹರ್ಷಗೊಂಡಿದ್ದು, ಕೆಲವೇ ದಿನಗಳಲ್ಲಿ ನೆಮ್ಮದಿಯಾಗಿ ಸಂಚರಿಸಬಹುದು ಎಂಬ ಆಶಾಭಾವದಲ್ಲಿ ಇದ್ದಾರೆ.

 

ಆಮೆಗತಿಯಲ್ಲಿ ಸಾಗುತ್ತಿದ್ದ, ಸಿದ್ದಾಪುರ ವಿರಾಜಪೇಟೆ ರಸ್ತೆ ಕಾಮಗಾರಿ ಪ್ರಾರಂಭಿಸಿ ವರ್ಷದ ಬಳಿಕ ಇದೀಗ ಚುರುಕುಗೊಂಡಿದ್ದು, ಡಾಂಬರೀಕರಣ ಬಿರುಸಿನಿಂದ ನಡೆಯುತ್ತಿದೆ. ಇದರಿಂದಾಗಿ ಸಾಕಷ್ಟು  ತೊಂದರೆ ಅನುಭವಿಸುತ್ತಿದ್ದ, ಸಾರ್ವಜನಿಕರು, ವಾಹನ ಸವಾರರು ಮತ್ತು ಮಕ್ಕಳು ನಿಟ್ಟುಸಿರು ಬಿಡುವಂತಾಗಿದೆ. ಅದಕ್ಕಾಗಿ ಕ್ಷೇತ್ರದ ಶಾಸಕರು, ಸಂಬಂಧಪಟ್ಟ ಅಧಿಕಾರಿಗಳಿಗೆ ಧನ್ಯವಾದಗಳನ್ನು ನಾಗರಿಕರ ಪರವಾಗಿ ತಿಳಿಸುತ್ತಿದ್ದೇನೆ.

ಸತೀಶ್, ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ

ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದುದರಿಂದ ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಆದರೆ ಇದೀಗ ಡಾಂಬರೀಕರಣ ಕಾರ್ಯ ಚುರುಕಿನಿಂದ ನಡೆಯುತ್ತಿರುವುದು ಹದಗೆಟ್ಟ ರಸ್ತೆಯಿಂದ ಬೇಸತ್ತಿದ್ದ ಜನರಿಗೆ ಇದೀಗ ನೆಮ್ಮದಿ ತಂದಿದೆ.

ಮಣಿ, ಸ್ಥಳೀಯ ನಿವಾಸಿ

Share this article

ಟಾಪ್ ನ್ಯೂಸ್

More News