ಜನವಾಹಿನಿ News ಸಿದ್ದಾಪುರ:- ವಾಹನ ಚಲಾಯಿಸುವ ಆಸೆಯಿಂದ ಕಾರ್ಮಿಕನೋರ್ವ ಟ್ರಾಕ್ಟರ್ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿದ ಟ್ರಾಕ್ಟರ್ ಹಳ್ಳಕ್ಕೆ ಮಗುಚಿ ಬಿದ್ದಿದ್ದು, ಕಾರ್ಮಿಕ ಸ್ಥಳದಲ್ಲೆ ಮೃತಪಟ್ಟ ಘಟನೆ ಸಿದ್ದಾಪುರ ಸಮೀಪದ ಹಿಲ್ ಕಿಲ್ ಎಸ್ವೇಟ್ನಲ್ಲಿ ಸಂಭವಿಸಿದೆ.
ಬಾಗಲಕೋಟೆಯ ನಿವಾಸಿ ಪ್ರವೀಣ್ (35) ಎಂಬಾತನೇ ಮೃತ ದುರ್ದೈವಿ.
ಎಸ್ಟೇಟ್ ನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಮುಂಜಾನೆ ಸಾಮಗ್ರಿಗಳನ್ನು ಒದಗಿಸಲು ಚಾಲಕನು ಇಲ್ಲದ ಸಂದರ್ಭ ವಾಹನ ಚಲಾಯಿಸುವ ಆಸೆಯಿಂದ ಟ್ರಾಕ್ಟರ್ ಚಲಾಯಿಸಿದ್ದು, ಈ ದುರ್ಘಟನೆಗೆ ಕಾರಣವಾಗಿದೆ.
ಘಟನಾ ಸ್ಥಳಕ್ಕೆ ಪೋಲೀಸ್ ಠಾಣಾಧಿಕಾರಿ ಮಂಜುನಾಥ್, ಹಾಗೂ ಸಿಬ್ಬಂದಿಗಳು ಭೇಟಿನೀಡಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸಂಬಂಧಿಕರು ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಸಂಬಂಧಪಟ್ಟವರಿಗೆ ಮೃತದೇಹವನ್ನು ನೀಡಲಾಗುತ್ತದೆ ಹೀಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆ ಶವಗಾರದಲ್ಲಿ ಮೃತದೇಹವನ್ನು ಇರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.







