ಸಿದ್ದಾಪುರ ವ್ಯಾಪ್ತಿಯಲ್ಲಿ ಹುಲಿ ಆತಂಕ : ಚಲನವಲನ ಪತ್ತೆಗಾಗಿ ಸಿಸಿ ಕ್ಯಾಮೆರಾ ಅಳವಡಿಸಿದ ಅರಣ್ಯ ಇಲಾಖೆ
ಸಿದ್ದಾಪುರ : ಇತ್ತೀಚೆಗೆ ಇಲ್ಲಿಗೆ ಸಮೀಪದ ಗುಹ್ಯ ವ್ಯಾಪ್ತಿಯ ಕೆಲಕಡೆ ಹುಲಿ ಹೆಜ್ಜೆ ಗುರುತು ಪತ್ತೆ ಆಗುವ ಮೂಲಕ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿತ್ತು. ಹುಲಿ ಚಲನವಲನ ಪತ್ತೆ ಹಚ್ಚುವ ನಿಟ್ಟಿನಲ್ಲಿ ಸೂಕ್ಷ್ಮ ಪ್ರದೇಶದಲ್ಲಿ ಕ್ಯಾಮರ ಅಳವಡಿಸುವಂತೆ ಸ್ಥಳೀಯರಿಂದಲೂ ಆಗ್ರಹ ಕೇಳಿಬಂದಿತ್ತು. ಇದೀಗ ಸಿದ್ದಾಪುರ ವ್ಯಾಪ್ತಿಯ ಇಂಜಿಲಗೆರೆಯ ಕೆಲಕಡೆ ಹುಲಿ ಚಲನವಲನದ ಹೆಜ್ಜೆ ಗುರುತು ಕಂಡುಬಂದಿದ್ದು, ಕೂಡಲೇ ಎಚ್ಚೆತ್ತ ಅರಣ್ಯ ಇಲಾಖೆ ಹುಲಿ ಚಲನವಲನ ಪತ್ತೆಗಾಗಿ ಈ ಭಾಗದ ಮೂರು ಕಡೆಗಳಲ್ಲಿ ಕ್ಯಾಮರಗಳನ್ನು ಅಳವಡಿಸಿ ನಿಗಾ ವಹಿಸಿದೆ.
ಕ್ಯಾಮರ ಅಳವಡಿಕೆ ಸಂದರ್ಭ ವಲಯ ಅರಣ್ಯಾಧಿಕಾರಿ ಶಿವರಾಂ, ಉಪ ವಲಯ ಅರಣ್ಯಾಧಿಕಾರಿ ಸಂಜಿತ್ ಸೋಮಯ್ಯ ಸೇರಿದಂತೆ ಆರ್ ಆರ್ ಟಿ ಸಿಬ್ಬಂದಿಗಳು ಇದ್ದರು.









