Breaking News :

ಸಿಸ್ಕೊ ಸಂಸ್ಥೆಯಿಂದ ಹೆಗ್ಗಳ ಶಾಲೆಗೆ ಕೊಡುಗೆ

 


ಜನವಾಹಿನಿ NEWS ವಿರಾಜಪೇಟೆ : ಸಮೀಪದ ಹೆಗ್ಗಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ಜಾಗೃತಿ ಹಾಗೂ ಸಿಸ್ಕೊ ಸಂಸ್ಥೆಯ ಸ್ವಯಂ ಸೇವಕರು ಆಗಮಿಸಿ ವಿದ್ಯಾರ್ಥಿಗಳಿಗೆ ಆಟದ ವಸ್ತುಗಳು, ಡ್ರಾಯಿಂಗ್ ಚಾರ್ಟ್, ಲೇಖನಿ, ಶಾಲೆಗೆ ಪೈಂಟಿಂಗ್, ಹಾಗೂ ಆಹಾರದ ಕಿಟ್ ಗಳನ್ನು ವಿತರಿಸಿದರು. ಮಾತ್ರವಲ್ಲದೆ ಮಕ್ಕಳಿಗೆ ಮದ್ಯಾಹ್ನ ದ ಉಪಹಾರದ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡಿದರು. ಒಟ್ಟು ಇಪ್ಪತ್ತು ಸ್ವಯಂ ಸೇವಕರನ್ನು ಒಳಗೊಂಡ ತಂಡದಲ್ಲಿ ಸಿಸ್ಕೊ ಸಂಸ್ಥೆಯ ಮಚ್ಚಾರಂಡ ಅಯ್ಯಪ್ಪ, ಜಾಗೃತಿ ಟ್ರಸ್ಟ್ ನ ಅಧಿಕಾರಿ ಕಣ್ಣನ್, ದಾನಿಗಳಾದ ಕೋಡಿರ ಗಣಪತಿ, ಗೋಪಾಲ್ ರಾಜ್, ಶಾಲಾ ಮುಖ್ಯ ಶಿಕ್ಷಕಿ ಕಮಲಮ್ಮ, ಸಹಶಿಕ್ಷಕಿ ಕಮರುನ್ನಿಸ, ಎಸ್ ಡಿ ಎಂ ಸಿ ಪಧಾಧಿಕಾರಿಗಳು, ಪೋಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Share this article

ಟಾಪ್ ನ್ಯೂಸ್

More News