ಜನವಾಹಿನಿ NEWS ಮೂರ್ನಾಡು : ಮೂರ್ನಾಡಿನ ಪಟ್ಟಣ ಮತ್ತು ವಿವಿಧೆಡೆ ೨೭ರಂದು ವಿವಿಧ ಸಂಘ ಸಂಸ್ಥೆಗಳಿಂದ ಗಣೇಶ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಗೌರಿ-ಗಣೇಶೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುವುದು.
ಮೂರ್ನಾಡಿನ ವೆಂಕಟೇಶ್ವರ ಕಾಲೋನಿಯ ವಿನಾಯಕ ಯುವಕ ಮಂಡಳಿಯ ವತಿಯಿಂದ ೩೪ನೇ ವರ್ಷದ ಗೌರಿ-ಗಣೇಶೋತ್ಸವದ ಗಣೇಶ ಉತ್ಸವ ಮೂರ್ತಿಯನ್ನು ೧೦-೦೦ ಗಂಟೆಗೆ ಪ್ರತಿಷ್ಠಾಪಿಸಲಾಗುವುದು. ಮೂರ್ನಾಡು ಗಾಂಧಿನಗರದ ಶ್ರೀರಾಮ ಮಂದಿರ ಸೇವಾ ಸಮಿತಿಯ ವತಿಯಿಂದ ೩೩ನೇ ವರ್ಷದ ಗೌರಿ-ಗಣೇಶೋತ್ಸವದ ಉತ್ಸವ ಗಣೇಶ ಮೂರ್ತಿಯನ್ನು ಗಾಂಧಿನಗರದ ಶ್ರೀರಾಮ ಮಂದಿರದಲ್ಲಿ ಬೆಳಿಗ್ಗೆ ೮-೦೦ ಗಂಟೆಗೆ ಪ್ರತಿಷ್ಠಾಪಿಸಲಾಗುವುದು. ವಿಘ್ನೇಶ್ವರ ಸೇವಾ ಸಮಿತಿಯ ವತಿಯಿಂದ ಮೂರ್ನಾಡು ಪಟ್ಟಣದ ಟಿ ಜಂಕ್ಷನ್ನಲ್ಲಿ ೩೧ನೇ ವರ್ಷದ ಗೌರಿ-ಗಣೇಶೋತ್ಸವ ಅಂಗವಾಗಿ ಗಣೇಶ ಮೂರ್ತಿಯನ್ನು ೧೧.೩೦ ಗಂಟೆಗೆ ಪ್ರತಿಷ್ಠಾಪಿಸಲಾಗುತ್ತದೆ. ಗಜೇಂದ್ರ ಯುವ ಶಕ್ತಿ ಸಂಘದ ವತಿಯಿಂದ ೬ನೇ ವರ್ಷದ ಗೌರಿ-ಗಣೇಶೋತ್ಸವವನ್ನು ಆಚರಿಸುತ್ತಿದ್ದು ನಾಪೋಕ್ಲು ರಸ್ತೆಯ ಹನುಮಾನ್ ಟ್ರೇರ್ಸ್ನಲ್ಲಿ ೯-೦೦ ಗಂಟೆಗೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು. ಅಯ್ಯಪ್ಪ ಗೆಳೆಯರ ಬಳಗ, ಎಂ-ಟೌನ್ ಇವರ ವತಿಯಿಂದ ೨ನೇ ವರ್ಷದ ಗೌರಿ-ಗಣೇಶೋತ್ಸವದ ವಿನಾಯಕ ಮೂರ್ತಿಯನ್ನು ೯-೦೦ ಗಂಟೆಗೆ ಅಯ್ಯಪ್ಪ ದೇವಸ್ಥಾನದ ವಾಣಿಜ್ಯ ಕಟ್ಟಡದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಕೋಡಂಬೂರಿನ ವಿಘ್ನೇಶ್ವರ ಗೆಳೆಯರ ಬಳಗದಿಂದ ೧೭ನೇ ವರ್ಷದ ಗೌರಿ-ಗಣೇಶೋತ್ಸವ ಅಂಗವಾಗಿ ಗಣೇಶ ಮೂರ್ತಿಯನ್ನು ೧೦-೦೦ ಗಂಟೆಗೆ ಪ್ರತಿಷ್ಠಾಪಿಸಲಾಗುತ್ತದೆ. ೨೭-೮-೨೫ ರಿಂದ ೨-೦೯-೨೫ರವರೆಗೆ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಗಳನ್ನು ಪೂಜಾ ವಿಧಿ-ವಿಧಾನಗಳ ಮೂಲಕ ೭ ದಿನಗಳವರೆಗೆ ಶ್ರದ್ಧಾಭಕ್ತಿಯಿಂದ ಪೂಜಿಸಿ, ತಾ.೨ರಂದು ಅಲಂಕೃತ ಮಂಟಪದಲ್ಲಿ ಗಣೇಶ ಉತ್ಸವ ಮೂರ್ತಿಯನ್ನಿರಿಸಿ, ಮೂರ್ನಾಡು ಮುಖ್ಯ ಬೀದಿಗಳಲ್ಲಿ ಶೋಭಯಾತ್ರೆ ನಡೆಸಿ ಬಲಮುರಿಯ ಕಾವೇರಿ ನದಿಯಲ್ಲಿ ವಿಸರ್ಜಿಸಲಾಗುವುದು.
ಹಾಗೆಯೆ ಗಜಾನನ ಯುವಕ ಸಂಘದ ವತಿಯಿಂದ ೨೨ನೇ ವರ್ಷದ ಗೌರಿ-ಗಣೇಶೋತ್ಸವದ ಗಣೇಶ ಉತ್ಸವ ಮೂರ್ತಿಯನ್ನು ಮುಂಜಾನೆ ೫-೦೦ ಗಂಟೆಗೆ ಗಣಪತಿ ಹೋಮ ಹಾಗೂ ಪೂಜೆಯೊಂದಿಗೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು. ಅದೆ ದಿನದಂದು ೧ ಗಂಟೆಗೆ ಮಹಾಮಂಗಳಾರತಿಯ ನಂತರ ಅನ್ನಸಂತರ್ಪಣೆ ನಡೆಯಲಿದೆ. ನಂತರ ೨ ಗಂಟೆಗೆ ಮೂರ್ನಾಡಿನ ಭಾರತೀಯ ನೃತ್ಯ ಕಲಾ ಶಾಲೆಯ ಕಲಾವಿದರಿಂದ ಜರುಗುವ ಭಜನಾ ನೃತ್ಯದೊಂದಿಗೆ ಮೂರ್ನಾಡಿನ ಮುಖ್ಯ ರಸ್ತೆಯಲ್ಲಿ ಅಲಂಕೃತ ಮಂಟಪದಲ್ಲಿ ಶೋಭಯಾತ್ರೆಯೊಂದಿಗೆ ಬಲಮುರಿಯ ಕಾವೇರಿ ನದಿಯಲ್ಲಿ ವಿಸರ್ಜಿಸಲಾಗುತ್ತದೆ. ಮೂರ್ನಾಡಿನ ಗಣೇಶ ಬಾಲಕರ ಬಳಗದ ವತಿಯಿಂದ ೨ನೇ ವರ್ಷದ ಗೌರಿ-ಗಣೇಶೋತ್ಸವದ ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಅದೆ ದಿನದಂದು ಅಲಂಕೃತ ಮಂಟಪದಲ್ಲಿ ಶೋಭಯಾತ್ರೆಯೊಂದಿಗೆ ಬಲಮುರಿಯ ಕಾವೇರಿ ನದಿಯಲ್ಲಿ ವಿಸರ್ಜಿಸಲಾಗುವುದು.
ಎಂ. ಬಾಡಗದ ವಿನಾಯಕ ಗೆಳೆಯರ ಬಳಗದ ವತಿಯಿಂದ ಎಂ. ಬಾಡಗದಲ್ಲಿ ೯ನೇ ವರ್ಷದ ಗೌರಿ-ಗಣೇಶೋತ್ಸವ ಅಂಗವಾಗಿ ಗಣೇಶ ಮೂರ್ತಿಯನ್ನು ೧೦-೦೦ ಗಂಟೆಗೆ ಪ್ರತಿಷ್ಠಾಪಿಸಿ, ೫ ದಿನಗಳವರೆಗೆ ಶ್ರದ್ಧಾಭಕ್ತಿಯಿಂದ ಪೂಜಿಸಿ, ೩೧ರಂದು ಎಂ. ಬಾಡಗ ಗ್ರಾಮದಲ್ಲಿ ಅಲಂಕೃತ ಮಂಟಪದಲ್ಲಿ ಶೋಭಯಾತ್ರೆಯೊಂದಿಗೆ ಬೇತ್ರಿಯ ಕಾವೇರಿ ನದಿಯಲ್ಲಿ ವಿಸರ್ಜಿಸಲಾಗುವುದು.
✒️ ಟಿ.ಸಿ. ನಾಗರಾಜ್, ಮೂರ್ನಾಡು.







