ಸ್ನೇಹಿತರ ಒಕ್ಕೂಟ ವಿರಾಜಪೇಟೆ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ
ಮಡಿಕೇರಿ : ವಿರಾಜಪೇಟೆ ನಗರದ ಮಲ್ಮ ಕಾಂಪ್ಲೆಕ್ಸ್ ಆವರಣದಲ್ಲಿ ಸ್ನೇಹಿತರ ಒಕ್ಕೂಟ ವಿರಾಜಪೇಟೆ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜ್ರಂಬಣೆಯಿಂದ ಆಚರಿಸಲಾಯಿತು.
ಧ್ವಜಾರೋಹಣವನ್ನು ನಿವೃತ್ತ ಯೋಧರಾದ ಪ್ರಕಾಶ್ ಅಪ್ಪಯ್ಯ, ಖ್ಯಾತ ವಕೀಲರಾದ ವಿಶ್ವನಾಥ್, ಡಾಕ್ಟರ್ ಬೊಪಣ್ಣ, ಕೋಲತಂಡ ಬೊಪ್ಪಯ್ಯ, ಎಂ ಸಿ ಕಾವೇರಮ್ಮ, ಸುದರ್ಶನ್ ರೈ ಅವರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಅತಿಥಿ ಗಣ್ಯರಾಗಿ ಪುರಸಭೆ ಹಿರಿಯ ಸದಸ್ಯರಾದ ಮತೀನ್ ಎಸ್ ಹೆಚ್, ಮೊಹಮ್ಮದ್ ರಾಫಿ, ಕುರ್ಗ್ ದಿ ಕಾಶ್ಮೀರ್ ಸಂಸ್ಥಾಪಕರಾದ ಫೈಸಲ್ , ಹಾಗೂ ಸ್ನೇಹಿತರ ಒಕ್ಕೂಟ ಗೌರವ ಅಧ್ಯಕ್ಷರಾದ ಶಫಿ ಅಹ್ಮದ್, ಅಧ್ಯಕ್ಷರಾದ ಹಬೀಬ್ ಉಲ್ಲಾ ಶರೀಫ್, ಸಂಸ್ಥಾಪಕರಾದ ಮೊಹಮ್ಮದ್ ನಯಾಜ್, ಸೈಯದ್ ಇಮ್ರಾನ್, ಮೆಲ್ರೋಯ್ ಲೋಬೊ, ಇಮ್ರಾನ್ ಖಾನ್, ಜಬಿವುಲ್ಲಾ, ಜಿಶಾನ, ಮೊಹ್ಸೀನ್, ಉಪಸ್ಥಿತರಿದ್ದರು ಸಭೆಯ ಸ್ವಾಗತ ಭಾಷಣವನ್ನು ಸಂಸ್ಥಾಪಕರಾದ ಮೊಹಮ್ಮದ್ ನಯಾಜ್ ಅವರು ನೆರವೇರಿಸಿ ಸರ್ವ ಗಣ್ಯರಿಗೆ ಸ್ವಾಗತ ಕೋರಿ ದೇಶದ ಸಮಸ್ತ ಜನರಿಗೆ ಶುಭಾಶಯಗಳನ್ನು ಕೋರಿದರು.







