Breaking News :

ಸ್ವಾತಂತ್ಯಕ್ಕಾಗಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದಂತಹ ಮಹನೀಯರನ್ನು ಯುವ ಪೀಳಿಗೆ ಎಂದಿಗೂ ಸ್ಮರಿಸಬೇಕು : ಮಂಜುಳ

 


ಸ್ವಾತಂತ್ಯಕ್ಕಾಗಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದಂತಹ ಮಹನೀಯರನ್ನು ಯುವ ಪೀಳಿಗೆ ಎಂದಿಗೂ ಸ್ಮರಿಸಬೇಕು : ಮಂಜುಳ


ಸಿದ್ದಾಪುರ : ಗುಹ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 79 ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಮುಖ್ಯ ಶಿಕ್ಷಕಿ ಮಂಜುಳ ರವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯಂದು ಮಾತ್ರವಲ್ಲ ಸ್ವಾತಂತ್ಯಕ್ಕಾಗಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದಂತಹ ಮಹನೀಯರನ್ನು ಯುವ ಪೀಳಿಗೆ ಎಂದಿಗೂ ಸ್ಮರಿಸಬೇಕು ಎಂದರು.

ಬಳಿಕ ಮುಖ್ಯ ಶಿಕ್ಷಕಿಯ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ದಿನದ ಮಹತ್ವ ಕುರಿತು ಮಾತನಾಡಿದ ಸಹ ಶಿಕ್ಷಕ ಶ್ರೀನಿವಾಸ್. ಆರ. ಕೆ, ಕೇವಲ ಸಾಂಬಾರ ಪದಾರ್ಥಗಳ ಮಾರಾಟಕ್ಕೆ ಭಾರತಕ್ಕೆ ಬಂದ ವಿದೇಶಿಗರು ನಮ್ಮಲ್ಲಿನ ಒಡಕನ್ನು ಬಳಕೆ ಮಾಡಿಕೊಂಡು ನಮ್ಮ ಮೇಲೆ ದಶಕಗಳ ಕಾಲ ಆಳ್ವಿಕೆ ನಡೆಸಿದರು. ನಮ್ಮ ಹಿರಿಯರ ತ್ಯಾಗ ಬಲಿದಾನದಿಂದ ನಾವು ವಿದೇಶಿಗರ ಹಿಡಿತದಿಂದ ಮುಕ್ತಿ ಪಡೆದ ದಿನವನ್ನೇ ಇಂದು ನಾವೆಲ್ಲ ಸ್ವಾತಂತ್ರ್ಯ ದಿನಾಚರಣೆಯಾಗಿ ಆಚರಣೆ ಮಾಡುದ್ದೇವೆ. ಅಂದಿಗೂ ಇಂದಿಗೂ ಭಾರತ ಬದಲಾಗಿದೆ. ಇಂದಿನ ಪೀಳಿಗೆ ಇವುಗಳನ್ನೆಲ್ಲ ಗಮನದಲ್ಲಿಟ್ಟುಕೊಳ್ಳಬೇಕು ಪ್ರತಿಯೊಬ್ಬರು ಪರಸ್ಪರ ಒಗ್ಗಟ್ಟಿನಿಂದ ಇರಬೇಕೆಂದು ಸಲಹೆ ನೀಡಿದರು.

ಇದೇ ಸಂದರ್ಭ ವಿದ್ಯಾರ್ಥಿಗಳಿಂದ ದೇಶಭಕ್ತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಮುಖ್ಯ ಶಿಕ್ಷಕಿ ಮಂಜುಳ ಸ್ವಾಗತಿಸಿದರೆ ಶಿಕ್ಷಕಿ ನೇತ್ರಾವತಿ ನಿರೂಪಿಸಿ, ವಂದಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕಿ ಝಾನ್ಸಿ ರಾಣಿ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Share this article

ಟಾಪ್ ನ್ಯೂಸ್

More News