ಸ್ವಾತಂತ್ರ್ಯ ದಿನಾಚರಣೆ : ಮಹಿಳಾ ಸಂಘದಿಂದ ಸರಕಾರಿ ಶಾಲೆಗೆ ಸಿಸಿ ಕ್ಯಾಮೆರಾ ಕೊಡುಗೆ
ಮಡಿಕೇರಿ : ಸೋಮವಾರಪೇಟೆ ತಾಲೂಕಿನ ತಣ್ಣೀರುಹಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ 79ನೇಯ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ಎಸ್.ಕೆ.ಎಸ್ ಮೈಕ್ರೋ ಫೈನಾನ್ಸ್ ಹಾಗೂ ಗ್ರಾಮೀಣ ಕೂಟ ಸಂಘದ ಮಹಿಳಾ ಸದಸ್ಯರು ಶಾಲೆಗೆ ಸೋಲಾರ್ ಸಿಸಿ ಕ್ಯಾಮರಾ ವನ್ನು ಮುಖ್ಯ ಶಿಕ್ಷಕಿ ಶಾಂತಮ್ಮ ಅವರಿಗೆ ಹಸ್ತಾಂತರಿಸುವ ಮೂಲಕ ಉಡುಗೊರೆಯಾಗಿ ನೀಡಿದರು.
ಶಾಲೆ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಸ್ನೇಹ ಸಮ್ಮಿಲನ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹರೀಶ್ ಹಾಗೂ ಉಪ ಕಾರ್ಯದರ್ಶಿ ಆನಂದ್ ರಾಜ್ ರವರು ಮಹಿಳಾ ಸಂಘದ ಸದಸ್ಯರಲ್ಲಿ ಕೋರಿದ್ದ ಮೇರೆಗೆ ಸಿಸಿ ಕ್ಯಾಮೆರಾ ವನ್ನು ಉಡುಗೊರೆಯಾಗಿ ನೀಡಲಾಗಿದೆ ಎಂದು ಸಂಘದ ಪ್ರಮುಖರು ಮಾಹಿತಿ ನೀಡಿದ್ದಾರೆ.
ಈ ಸಂದರ್ಭ ಶಿಕ್ಷಕ ವೃಂದ ಹಾಗೂ ಸ್ನೇಹ ಸಮ್ಮಿಲನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಫೀಕ್, ಕಾರ್ಯದರ್ಶಿ ಹರೀಶ್, ಉಪಕಾರ್ಯದರ್ಶಿ ಆನಂದ್ ರಾಜ್, ಎಸ್ ಡಿ ಎಂ ಸಿ ಅಧ್ಯಕ್ಷ ತಿಮ್ಮಪ್ಪ, ಎಲ್ ಕೆ ಜಿ ಹಾಗೂ ಯುಕೆ ಜಿ ಗೌರವಾನ್ವಿತ ಅಧ್ಯಕ್ಷರು ಹಾಗು ಮಾಜಿ ಗ್ರಾ.ಪಂ ಅಧ್ಯಕ್ಷ ಲೋಕನಂದ, ನೇರುಗಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ತಣ್ಣೀರುಹಳ್ಳ ಗ್ರಾಮಸ್ಥರು ಇದ್ದರು.









