Breaking News :

ಹಿಂದೂ ಕಾರ್ಯಕರ್ತನ ಮೇಲಿನ ಹಲ್ಲೆ ಖಂಡನೀಯ : ಎಡಿಕೇರಿ ಪ್ರಸನ್ನ

 


ಹಿಂದೂಗಳ ಮೇಲಿನ ದೌರ್ಜನ್ಯವನ್ನು ಸಹಿಸಲಾಗದು


ಜನವಾಹಿನಿ News ಮಡಿಕೇರಿ : ಶನಿವಾರ ಬಲ್ಲಮಾವಟ್ಟಿಯಲ್ಲಿ ನಡೆಯಲಿರುವ ಹಿಂದೂ ಸಂಗಮ ಕಾರ್ಯಕ್ರಮಕ್ಕೆ ನಾಪೋಕ್ಲು ಪಟ್ಟಣದಲ್ಲಿ ಪ್ರಚಾರ ನಡೆಸುವ ವೇಳೆ ಶುಕ್ರವಾರ ಹಿಂದೂ ಕಾರ್ಯಕರ್ತ ಗೌತಮ್ ಎಂಬಾತನ ಮೇಲೆ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಮಗ ಸಿದ್ದಿಕ್ ಹಾಗೂ ಇತರರು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆಯತ್ನ ಮಾಡಿರುವುದು ಖಂಡನೀಯ ಹಾಗೂ ಎಂದಿಗೂ ಇಂತ ಘೋರ ಘಟನೆಯನ್ನು ಸಹಿಸಲಾಗದು ಎಂದು ಉದ್ಯಮಿ ಸಮಾಜ ಸೇವಕ, ಬಲ್ಲಮಾವಟ್ಟಿಯಲ್ಲಿ ಮೂಲದ ಎಡಿಕೇರಿ ಪ್ರಸನ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆಯ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು ಕೊಡಗಿನಲ್ಲಿ ಎಂದೂ ಇಲ್ಲದ ಘೋರ ಕೃತ್ಯಗಳು ಆರಂಭವಾಗುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ.

ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಹಾಗೂ ಅವರ ಮಕ್ಕಳು ಸ್ನೇಹಿತರ ಮೇಲೆ ಈ ಹಿಂದೆಯಿಂದಲೂ ಹಲವು ಆರೋಪಗಳು ಸೇರಿದಂತೆ ಪ್ರಕರಣಗಳು ಕೂಡ ಇದ್ದು ಪೊಲೀಸ್ ಇಲಾಖೆ ಮೃದು ದೋರಣೆ ತಾಳಿದ್ದೇ ಈ ಘಟನೆಗೆ ಮುಖ್ಯ ಕಾರಣ ಎಂದಿದ್ದಾರೆ. ಈ ಹಿಂದೆಯೇ ಇಂತವರನ್ನು ಕಾನೂನಿನಡಿಯಲ್ಲಿ ಸೂಕ್ತ ಕ್ರಮ ಜರುಗಿಸಿದ್ದಾರೆ ಇಂದು ಈ ಘಟನೆ ನಡೆಯುತ್ತಿರಲಿಲ್ಲ ಎಂದಿದ್ದಾರೆ.

ಕೊಡಗಿನ ಸ್ವಚ್ಛ ಇತಿಹಾಸಕ್ಕೆ ದಕ್ಕೆ


ಕೊಡಗಿನ ಸ್ವಚ್ಛ ಬಾಂದವ್ಯ ಮತ್ತು ಒಡನಾಟಕ್ಕೆ ಇದೊಂದು ಕಪ್ಪು ಚುಕ್ಕೆಯಾಗಿದ್ದು ಹಿಂದೂಗಳ ತಾಳ್ಮೆಯನ್ನು ಯಾರು ಕೆಣಕಿದರು ಪರಿಣಾಮ ಕೆಟ್ಟದಾಗಿರುತ್ತದೆ ಎಂದು ಪ್ರಸನ್ನ ಎಚ್ಚರಿಸಿದ್ದಾರೆ. ಉತ್ತಮ ವಿದ್ಯೆ ಮತ್ತು ಉದ್ಯೋಗ ಮಾಡಿಕೊಂಡಿರುವ ಹಿಂದೂ ಯುವಕರನ್ನು ಕೆಣಕಿದರೆ ಕೊಡಗಿನ ಇಡೀ ಯುವ ಸಮುದಾಯ ಒಟ್ಟಾಗಿ ಪ್ರತ್ಯುತ್ತರ ನೀಡುವ ಕೆಲಸ ಮಾಡಲಿದೆ ಎಂದಿದ್ದಾರೆ.

ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಲಿ


ಕಳೆದ ವಾರವಷ್ಟೇ ಬಿರುನಾಣಿಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮಕ್ಕಾಗಿ ಹಾಕಿದ್ದ ಬಂಟಿಂಗ್ಸ್ ಕಿತ್ತೊಯ್ದ ಪ್ರಕರಣದಲ್ಲೂ ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿತ್ತು. ಆದರೆ ಒಂದೇ ವಾರದ ಅಂತರದಲ್ಲಿ ಹಿಂದೂ ಕಾರ್ಯಕರ್ತನ ಮೇಲೆ ಕೊಲೆಯತ್ನ ನಡೆದಿರುವುದು ಕೊಡಗು ಎತ್ತ ಸಾಗುತ್ತಿದೆ ಎಂಬುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದ್ದು ಕೊಲೆಯೆತ್ನ ಪ್ರಕಣರ ದಾಖಲಿಸಿರುವ ಪೊಲೀಸ್ ಇಲಾಕೆ ತನಿಖಾ ಸಂದರ್ಭದಲ್ಲಿ ಯಾವುದೇ ಹಸ್ತಕ್ಷೇಪ ಮಾಡದೇ ತಪ್ಪಿತಸ್ಥರಿಗೆ ಶಿಕ್ಷೆ ಕೊಡುವ ವರದಿ ನೀಡದೆ ಇದ್ದಲ್ಲಿ ಹಿಂದೂ ಕಾರ್ಯಕರ್ತರೆಲ್ಲರೂ ನ್ಯಾಯಕ್ಕಾಗಿ ಬೀದಿಗಿಳಿಯಬೇಕಾಗುತ್ತೆ ಎಂದು ಹೇಳಿದ್ದಾರೆ.

Share this article

ಟಾಪ್ ನ್ಯೂಸ್

More News