Breaking News :

ಹಿಟ್ ಅಂಡ್ ರನ್ : ಗೋಣಿಕೊಪ್ಪ – ಕೈಕೇರಿ ಬಳಿ ಅಪರಿಚಿತ ವ್ಯಕ್ತಿ ಸಾವು


ಜನವಾಹಿನಿ News ಗೋಣಿಕೊಪ್ಪ : ಗೋಣಿಕೊಪ್ಪಲು ವಿರಾಜಪೇಟೆಯ ಮುಖ್ಯ ರಸ್ತೆ ಕೈಕೇರಿ ಬಳಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಅಪರಿಚಿತ ಪಾದಚಾರಿಗೆ ವಾಹನ ಡಿಕ್ಕಿಪಡಿಸಿದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ತಲೆ ಹಾಗೂ ಎದೆ ಭಾಗಕ್ಕೆ ತೀವ್ರ ಸ್ವರೂಪದ ಗಾಯಗಳು ಉಂಟಾಗಿ ಮೃತಪಟ್ಟಿದ್ದಾರೆ ಎಂದು ಗೋಣಿಕೊಪ್ಪಲು ಆಸ್ಪತ್ರೆಯ ವೈದ್ಯಧಿಕಾರಿಗಳು ದೃಢಪಡಿಸಿದ್ದಾರೆ. ಅಂದಾಜು 55 ವರ್ಷಪ್ರಾಯದ ಕೂಲಿ ಕಾರ್ಮಿಕ ಎಂದು ಗುರುತಿಸಲಾಗಿದ್ದು ಇವರ ಪರಿಚಯ ಇರುವವರು, ಹಾಗೂ ಕುಟುಂಬಸ್ಥರು ಗೋಣಿಕೊಪ್ಪಲು ಪೊಲೀಸ್ ಠಾಣೆ ಅಥವಾ ಗೋಣಿಕೊಪ್ಪಲು ಆಸ್ಪತ್ರೆಯಲ್ಲಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದೆಂದು ಪ್ರಕಟಣೆ ತಿಳಿಸಲಾಗಿದೆ.

Share this article

ಟಾಪ್ ನ್ಯೂಸ್

More News