ಹೃದಯಾಘಾತದಿಂದ ಮಡಿಕೇರಿ ಉದ್ಯಮಿ ಅಂಬಿಕಾ ಗಣೇಶ್ ಸಾವು
ಮಡಿಕೇರಿ : ಉದ್ಯಮಿ ಅಜ್ಜಿನಂಡ ಗಣೇಶ್ ಅಯ್ಯಣ್ಣ (68) ಹೃದಯಾಘಾತ ದಿಂದ ನಿಧನರಾಗಿದ್ದಾರೆ. ಶ್ರೀ ದಂಡಿನ ಮಾರಿಯಮ್ಮ ದೇವಲಾಯದ ಟ್ರಸ್ಟಿ, ಹಾಗೂ ಹಲವು ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಗಣೇಶ್, ಮಡಿಕೇರಿಯ ಕಾಲೇಜ್ ರಸ್ತೆಯಲ್ಲಿ ಅಂಬಿಕಾ ವಿಡಿಯೋ, ಅಂಗಡಿಯನ್ನು ತೆರದು ಕೊಡಗು ಸೇರಿದಂತೆ ಇತರ ಜಿಲ್ಲೆಗಳ ಪ್ರತಿಭೆಗಳ ಧ್ವನಿಮುದ್ರಿತ ಹಾಡುಗಳ ಕ್ಯಾಸೆಟ್ಗಳನ್ನು ಅತಿ ಹೆಚ್ಚು ಮಾರಾಟ ಮಾಡುತ್ತಾ ಪ್ರೋತ್ಸಾಹಿಸುತ್ತಿದ್ದರು.
ಜಿಲ್ಲಾ ಚೇಂಬರ ಕಾಮರ್ಸ್ ನ ಪ್ರಧಾನ ಕಾರ್ಯದರ್ಶಿಗಲಾದ ಪತ್ನಿ ಮೊಂತಿ ಗಣೇಶ್ ಹಾಗು ಮೂವರು ಮಕ್ಕಳನ್ನು ಆಗಲಿದ್ದಾರೆ.
ಅಂತಿಮ ಸಂಸ್ಕಾರ ನಾಳೆ ಕೊಡವ ರುದ್ರ ಭೂಮಿಯಲ್ಲಿ ಮಧ್ಯಾಹ್ನ 12 ಗಂಟೆಯ ಬಳಿಕ ನಡೆಯಲಿದೆ ಕುಟುಂಬ ಮೂಲಗಳು ತಿಳಿಸಿವೆ.








