ಬೆಲ್ಜಿಯಂ ದೇಶದ ರಾಯಭಾರಿಯೊಂದಿಗೆ ಸಭೆ
ಬೆಂಗಳೂರು : ಬೆಲ್ಜಿಯಂ ದೇಶದ ರಾಯಭಾರಿಯವರಾದ H.E. Mr ಡಿಡ್ಯಾರ್ ವ್ಯಾಂಡೆರ್ ಹಾಸ್ಸೇಲ್ಟ್ ರವರೊಂದಿಗೆ ಮಾನ್ಯ ಮುಖ್ಯಮಂತ್ರಿಗಳು ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಮಾತುಕತೆ ನಡೆಸಿದರು.
ತಮ್ಮ ದೇಶದ ನಿಯೋಗದೊಂದಿಗೆ ಇಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರನ್ನು ಭೇಟಿಯಾದ ಬೆಲ್ಜಿಯಂ ರಾಯಭಾರಿ ಅವರು ಹಲವು ಪ್ರಮುಖ ದ್ವಿಪಕ್ಷೀಯ ವಿಷಯಗಳ ಕುರಿತು ಗಂಭೀರ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು, ಸರಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.








