Breaking News :

ಕಾಡಾನೆ ದಾಳಿಗೆ ವ್ಯಕ್ತಿ  ಬಲಿ: ತಡರಾತ್ರಿ ಚೆಂಬುವಿನಲ್ಲಿ ನಡೆದ ಘಟನೆ : ರಾತ್ರಿಯೇ ಸ್ಥಳಕ್ಕೆ ಸಂಕೇತ್ ಪೂವಯ್ಯ ಭೇಟಿ ಪರಿಶೀಲನೆ


ಕಾಡಾನೆ ದಾಳಿಗೆ ವ್ಯಕ್ತಿ  ಬಲಿ: ತಡರಾತ್ರಿ ಚೆಂಬುವಿನಲ್ಲಿ ನಡೆದ ಘಟನೆ : ರಾತ್ರಿಯೇ ಸ್ಥಳಕ್ಕೆ ಸಂಕೇತ್ ಪೂವಯ್ಯ ಭೇಟಿ ಪರಿಶೀಲನೆ


ಮಡಿಕೇರಿ : ಚೆಂಬು ಗ್ರಾಮದ ದಬ್ಬಕ್ಕ ಭಾಗದಲ್ಲಿ ಇಂದು ರಾತ್ರಿ ಹೊತ್ತಲ್ಲಿ ಆನೆ ದಾಳಿಯಿಂದ ಕೊಪ್ಪದ ಶಿವಪ್ಪ (72) ಎಂಬ ರೈತ ಮೃತಪಟ್ಟಿರುತ್ತಾರೆ.
ಸುದ್ದಿ ತಿಳಿದೊಡನೆ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರಾದ ಶ್ರೀ ಸಂಕೇತ್ ಪೂವಯ್ಯ ಅವರು ಸಂಪಾಜೆ ಆಸ್ಪತ್ರೆಗೆ ಭೇಟಿ ನೀಡಿ ಘಟನೆಯ ಬಗ್ಗೆ ವಿವರ ಪಡೆದುಕೊಂಡರು.

ಸ್ಥಳೀಯರೊಂದಿಗೆ ಮಾತನಾಡಿದ ಬಳಿಕ, ವಿಷಯವನ್ನು ಶಾಸಕರಿಗೆ ತಿಳಿಸಿ ಕೂಡಲೇ ಆ ಭಾಗದಲ್ಲಿ ಇರುವ ಒಂದು ಪುಂಡಾನೆಯನ್ನು ಸೆರೆ ಅನುಮತಿ ಕೊಡಿಸುವುದಾಗಿ ಭರವಸೆ ನೀಡಿದರು ಅಲ್ಲದೆ ತಕ್ಷಣ ಆನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆ ಮಾಡುವಂತೆ ಅರಣ್ಯ ಇಲಾಖೆಗೆ ಸೂಚಿಸಿದರಲ್ಲದೆ, ಅರಣ್ಯ ಇಲಾಖೆಗೆ ಹೆಚ್ಚು ಸಿಬ್ಬಂದಿ ಒದಗಿಸುವ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ರವಿರಾಜ್ ಹೊಸೂರು, ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ಗ್ರಾಮ ಪಂಚಾಯತ್ ಸದಸ್ಯರಾದ ಆದಮ್ ಕುಂಹಿ, ಪದ್ಮನಾಭ ಮಂಗಳಪ್ಪಾರೆ, ರಘುನಾಥ್ ಬಾಲಂಬಿ, ವಿನಯ ಮಾಣಿಕಲ್ಲು, ಕೊಪ್ಪದ ಶಿವರಾಮ, ಕೊಪ್ಪದ ಭುವನೇಶ್ವರ, ವಲಯ ಅರಣ್ಯ ಅಧಿಕಾರಿ, ಸಿಬ್ಬಂದಿ ವರ್ಗದವರು ಹಾಗೂ ವೈದ್ಯರು ಉಪಸ್ಥಿತರಿದ್ದರು.

Share this article

ಟಾಪ್ ನ್ಯೂಸ್

More News