Breaking News :

ವಿದ್ಯುತ್ ಬೋರ್ಡ್ ನಲ್ಲಿ ನೇತು ಹಾಕಿದ್ದ ಮೊಬೈಲ್ ಚಾರ್ಜರ್ ಕಚ್ಚಿದ ಮಗು ವಿದ್ಯುತ್ ಶಾಕ್ ಹೊಡೆದು ಮೃತ್ಯು

ಒಂದೂವರೆ ವರ್ಷದ ‌ಮಗು ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿರುವ ಆಘಾತಕಾರಿ ಘಟನೆ ತೆಲಂಗಾಣದ ನಿರ್ಮಲ್ ಜಿಲ್ಲೆಯ ಕಡಂ ಮಂಡಲದ ಕೋಟ ಮಡ್ಡಿಪಡಗ ಗ್ರಾಮದಲ್ಲಿ ನಡೆದಿದೆ.

ದುರ್ಗಂ ಆರಾಧ್ಯ ಮೃತ ಒಂದೂವರೆ ವರ್ಷದ ಬಾಲಕಿ. ಬಾಲಕಿ ವಿದ್ಯುತ್ ಬೋರ್ಡ್ ನಲ್ಲಿ ನೇತು ಹಾಕಿದ್ದ ಚಾರ್ಜರ್ ಕೇಬಲ್ ಹಿಡಿದು ಆಟವಾಡುತ್ತಿತ್ತು. ಈ ವೇಳೆ ಚಾರ್ಜರ್ ನ್ನು ಕಚ್ಚಿದ್ದು, ವಿದ್ಯುತ್ ಶಾಕ್ ಹೊಡೆದಿದೆ.

ತಕ್ಷಣ ಬಾಲಕಿಯನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಆದರೇ ಚಿಕಿತ್ಸೆ ಫಲಿಸದೆ ಬಾಲಕಿ ದುರ್ಗಂ ಆರಾಧ್ಯ ಸಾವನ್ನಪ್ಪಿದ್ದಾರೆ.

ಮಗುವಿನ ಆಕಸ್ಮಿಕ ಸಾವಿನಿಂದ ಪೋಷಕರ ರೋದನ ಮುಗಿಲು ಮುಟ್ಟಿದೆ. ನಾವು ದಿನನಿತ್ಯ ಮೊಬೈಲ್ ಚಾರ್ಜ್ ಗೆ ಇಟ್ಟು ಮನೆಯಲ್ಲಿ ಚಾರ್ಜರ್ ಆಗೆಯೇ ಬಿಟ್ಟು ತೆರಳುತ್ತೇವೆ, ಇಂತಹ ಘಟನೆಗಳು ನಡೆಯುವುದರಿಂದ ಈ ಬಗ್ಗೆ ಪೋಷಕರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

Share this article

ಟಾಪ್ ನ್ಯೂಸ್

More News