Breaking News :

ಟೀ ಅಂಗಡಿ‌ ಮೇಲೆ ಟ್ಯಾಂಕರ್ ಪಲ್ಟಿ; ಚಾ ಸವಿಯುತ್ತಿದ್ದ ನಾಲ್ವರು ದುರ್ಮರಣ

ಬಸ್‌‍ ಮತ್ತು ಟ್ಯಾಂಕರ್‌ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬಳಿಕ ಟೀ ಅಂಗಡಿ ಮೇಲೆ ಟ್ಯಾಂಕರ್‌ ಪಲ್ಟಿಯಾದ ಪರಿಣಾಮ ನಾಲ್ವರು ಮತಪಟ್ಟು 13 ಮಂದಿ ಗಾಯಗೊಂಡಿರುವ ಘಟನೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ನಡೆದಿದೆ.

ಗಂಜಾಂ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 59ರಲ್ಲಿ ಹಿಂಜಿಲಿ ಬಳಿಯ ಸಮರಜೋಳದಲ್ಲಿ ಅಪಘಾತ ಸಂಭವಿಸಿದೆ.

ಭವಾನಿಪಟ್ಟಣದಿಂದ ಬರ್ಹಾಂಪುರಕ್ಕೆ ತೆರಳುತ್ತಿದ್ದ ಬಸ್ ಮತ್ತು ಟ್ಯಾಂಕರ್‌ ನಡುವೆ ಮೊದಲು ಅಪಘಾತವಾಗಿದೆ. ಬಳಿಕ ಟ್ಯಾಂಕರ್ ಟೀ ಅಂಗಡಿ‌ ಮೇಲೆ ಪಲ್ಟಿಯಾಗಿದೆ. ಬಸ್‌‍ನಲ್ಲಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೃತರಲ್ಲಿ ಉಳಿದ ಮೂವರು ಟೀ ಸ್ಟಾಲ್‌ನಲ್ಲಿ ಕುಳಿತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡವರನ್ನು ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.

Share this article

ಟಾಪ್ ನ್ಯೂಸ್

More News