Breaking News :

ದರ್ಶನ್ ವಿರುದ್ದ ಮತ್ತೆ ಮೂರು ಪ್ರಕರಣ ದಾಖಲು

ಜೈಲಿನಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ಹಿನ್ನೆಲೆಯಲ್ಲಿ ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತೀಮಾ ಅವರು ಪ್ರಕರಣದ ತನಿಖೆಗೆ ಮೂರು ವಿಶೇಷ ತಂಡಗಳ ರಚನೆ ಮಾಡಿದ್ದಾರೆ.

ಬೇಗೂರು ಇನ್ಸ್‌ಪೆಕ್ಟರ್ ಕೃಷ್ಣ ಕುಮಾರ್, ರೌಡಿಶೀಟರ್‌ಗಳ ಜತೆ ದರ್ಶನ್ ಬೇರೆತಿದ್ದು ಹೇಗೆ? ಲಾನ್‌ನಲ್ಲಿ ಎಲ್ಲರು ಒಟ್ಟಿಗೆ ಕೂರಲು ಚೇರ್ ವ್ಯವಸ್ಥೆ ಮಾಡಿದವರು ಯಾರು? ಕಾಫಿ ಮಗ್ ಹೇಗೆ ಬಂತು, ಹಾಗೂ ಜೈಲಿನಲ್ಲಿ ಸಿಗರೇಟ್, ಮದ್ಯ, ಮಾದಕವಸ್ತು ನಿಷೇಧ ಇದ್ದರೂ ಸಿಗರೇಟ್ ಹೇಗೆ ಸಿಕ್ಕಿತು ಎಂದು ತನಿಖೆ ನಡೆಸಲಿದ್ದಾರೆ.

ಇನ್ನೂ ಎರಡನೇ ಪ್ರಕರಣದ ತನಿಖೆ ಹುಳಿಮಾವು ಇನ್ಸ್‌ಪೆಕ್ಟರ್
ಕುಮಾರಸ್ವಾಮಿ ನಡೆಸಲಿದ್ದಾರೆ. ಮೊಬೈಲ್ ಫೋನ್‌ನಲ್ಲಿ ಫೋಟೊ ತೆಗದಿದ್ದು ಹಾಗೂ ವಿಡಿಯೊ ಕರೆ ಬಗ್ಗೆ ಹುಳಿಮಾವು ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ನೇತೃತ್ವದಲ್ಲಿ ಎರಡನೇ ಪ್ರಕರಣದ ತನಿಖೆ ನಡೆಯಲಿದೆ. ಇನ್ನೂ ಜೈಲಿನಲ್ಲಿ ಫೋಟೊ ತೆಗೆದು ಹೊರಗಡೆ ರವಾನೆ ಮಾಡಿದ್ದು ಯಾರು? ಜೈಲಿನಲ್ಲಿ ಮೊಬೈಲ್ ಬಳಕೆ ನಿಷೇಧ ಇದ್ದರೂ ಆರೋಪಿಗಳ ಕೈಗೆ ಮೊಬೈಲ್ ಸಿಕ್ಕಿದ್ದು ಹೇಗೆ? ನೆಟ್ ಕನೆಕ್ಷನ್ ಹೇಗೆ ಬಂತು? ಅಲ್ಲದೇ ಹೊರಗಡೆಯಿಂದ ಜೈಲಿಗೆ ವಿಡಿಯೊ ಕರೆ ಮಾಡಿ ದರ್ಶನ್ ತೋರಿಸಿದ ಬಗ್ಗೆಯೂ ತನಿಖೆ ನಡೆಯಲಿದೆ.

ಎಲೆಕ್ಟ್ರಾನಿಕ್ ಸಿಟಿ ಎಸಿಪಿ ಮಂಜುನಾಥ್ ಅವರಿಂದ ಮೂರನೇ ಪ್ರಕರಣದ ತನಿಖೆ ನಡೆಯಲಿದೆ. ಜೈಲು ಅಧಿಕಾರಿಗಳ ಕರ್ತವ್ಯ ಲೋಪದ ಬಗ್ಗೆ ತನಿಖೆ ನಡೆಸಲಿದ್ದಾರೆ. ಯಾರೆಲ್ಲ ಸಹಾಯ ಮಾಡಿದ್ದರೂ, ಇದರ ಹಿಂದೆ ಯಾರ ಕುಮ್ಮಕ್ಕು ಇದೆ? ಎಂದು ತನಿಖೆ ನಡೆಸಲಿದ್ದಾರೆ.

Share this article

ಟಾಪ್ ನ್ಯೂಸ್

More News