Breaking News :

ಮಸಣಿಕ್ಕಮ್ಮನಿಗೆ ಆಷಾಢ ವಿಶೇಷ ಪೂಜೆ : ನವರಸ ನಾಯಕ ಜಗ್ಗೇಶ್ ಭಾಗಿ

ಮೈಸೂರು : ಪಿರಿಯಪಟ್ಟಣದ ಶ್ರೀ ಮಸಣಿಕಮ್ಮ ದೇವಾಲಯಕ್ಕೆ ಭೇಟಿ ನೀಡಿದ ನವರಸ ನಾಯಕ ಜಗ್ಗೇಶ್ ಆಷಾಢ ತಿಂಗಳ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಭೇಟಿ ನೀಡಿದ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ಅಮ್ಮನ ದರ್ಶನ ಪಡೆದುಕೊಂಡರು.

ಈ ಕುರಿತು ತಮ್ಮ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಜಗ್ಗೇಶ್ “ನನ್ನ ಮನೆ ದೇವರು ಪಿರಿಯಾಪಟ್ಟಣದ ಶ್ರೀ ಮಸಣೀಕಮ್ಮ ಮಾತೆ. ನನ್ನ ತಾತ ಮಾಯಸಂದ್ರದಿಂದ ನಡೆದು ಬಂದು ಸೇವೆಮಾಡಿ ಹೋಗುತ್ತಿದ್ದರು.

ನಮ್ಮ ತಾತ, ನೀನು ಈ ಪದ್ಧತಿ ನಿನ್ನ ಕೊನೆಯವರೆಗು ಮುಂದುವರಿಸಿಕೊಂಡು ಹೋಗಬೇಕೆಂದು ಹೇಳಿದ್ದರು. ನಮ್ಮ ಹಿರಿಯರ ಮಾತನ್ನು ನಾನು ಶಿರಸಾವಹಿಸಿ ಪಾಲಿಸುತ್ತಿರುವೆ ಎಂಬುದಾಗಿ ಬರೆದುಕೊಂಡಿದ್ದಾರೆ.

Share this article

ಟಾಪ್ ನ್ಯೂಸ್

More News