Breaking News :

ಚೆಸ್ಕಂ ಕಛೇರಿಯಲ್ಲಿ ಚಾಮುಂಡೇಶ್ವರಿ ಪೂಜಾ ಮಹೋತ್ಸವ

ಚೆಸ್ಕಂ ಕಛೇರಿಯಲ್ಲಿ ಚಾಮುಂಡೇಶ್ವರಿ ಪೂಜಾ ಮಹೋತ್ಸವ:

ವಿರಾಜಪೇಟೆ: : ಇಲಾಖೆಯ ಸಿಬ್ಬಂದಿಗಳ ಆರೋಗ್ಯ ಮತ್ತು ಉನ್ನತಿ ಲಭಿಸಲು ಸಲುವಾಗಿ ಕಛೇರಿಯಲ್ಲಿ ಆಷಾಢ ಚಾಮುಂಡೇಶ್ವರಿ ಪೂಜೆ ನಡೆಸಲಾಯಿತು.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕಾರ್ಯ ಮತ್ತು ಪಾಲನೆ ಉಪವಿಭಾಗ ವಿರಾಜಪೇಟೆ ಇಲಾಖೆಯ ಸಿಬ್ಬಂದಿಗಳು ಮತ್ತು ಅನುಮತಿ ಪಡೆದ ಗುತ್ತಿಗೆದಾರರ ಸಂಘ ವಿರಾಜಪೇಟೆ ತಾಲೂಕು ಸಂಯುಕ್ತ ಆಶ್ರಯದಲ್ಲಿ ನಗರದ ಮೂರ್ನಾಡು ರಸ್ತೆಯ ಶಾಖಾ ಕಛೇರಿಯಲ್ಲಿ ೨ ನೇ ವರ್ಷದ ಶ್ರೀ ಚಾಮುಂಡೇಶ್ವರಿ ಪೂಜೆ ಮತ್ತು ಇಲಾಖೆಯ ಸಿಬ್ಬಂದಿಗಳಿಗೆ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು. ಕಛೇರಿಯಲ್ಲಿ ಶ್ರೀ ಚಾಮುಂಡೇಶ್ವರಿ ಪೂಜೆಯನ್ನು ನಗದ ಸೀತಾರಾಮ ಭಟ್ ಅವರು ನೆರವೇರಿಸಿದರು.

ಇಲಾಖೆ ಸಿಬ್ಬಂದಿಗಳು, ಅಧಿಕಾರಿಗಳು ಗುತ್ತಿಗೆದಾರರ ಆರೋಗ್ಯ ಮತ್ತು ಕುಟುಂಬದ ಅಂಗಗಳಿಗೆ ಆರೋಗ್ಯ ಕರುಣಿಸುವಂತೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಪ್ರಸಾದ ವಿತರಣೆ ನಡೆಯಿತು.

ಈ ಸಂಧರ್ಭದಲ್ಲಿ ವಿರಾಜಪೇಟೆ ಉಪ ವಿಭಾಗ ವ್ಯಾಪ್ತಿಯ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳು ಹಾಗೂ ನೌಕರರು, ವಿರಾಜಪೇಟೆ ತಾಲ್ಲೂಕು ಅನುಮತಿ ಪಡೆದ ಗುತ್ತಿಗೆದಾರರ ಸಂಘದ ಅದ್ಯಕ್ಷರು,ಪದಾಧಿಕಾರಿಗಳು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ದೇವಿಯ ಅನುಗ್ರಹ ಪಡೆದರು. ಅಗರ್ ವಾಲ್ಸ್ ನೇತ್ರ ಚಿಕಿತ್ಸಾಲಯ ವಿರಾಜಪೇಟೆ ಇದರ ವತಿಯಿಂದ ನುರಿತ ವೈದ್ಯರಿಂದ ಇಲಾಖೆಯ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ, ಗುತ್ತಿಗೆ ದಾರರಿಗೆ ಹಾಗೂ ಕುಟುಂಬದ ಸದಸ್ಯರಿಗೆ ಉಚಿತ ನೇತ್ರ ಪರೀಕ್ಷೆಯನ್ನು ಮಾಡಲಾಯಿತು.

Share this article

ಟಾಪ್ ನ್ಯೂಸ್

More News