Breaking News :

ಚೇಲಾವರ : ಶೌಚಾಲಯ ಗುಂಡಿಗೆ ಬಿದ್ದು, ಎದ್ದ ಕಾಡಾನೆ 

ಚೇಲಾವರ : ಶೌಚಾಲಯ ಗುಂಡಿಗೆ ಬಿದ್ದು, ಎದ್ದ ಕಾಡಾನೆ

ವಿರಾಜಪೇಟೆ : ಆಹಾರ ಅರಸಿ ಬಂದ ಕಾಡಾನೆಯೊಂದು ಶೌಚಾಲಯ ಗುಂಡಿಗೆ ಬಿದ್ದು ಮೇಲೇಳಲು ಹರಸಾಹಸಪಟ್ಟ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.

ವಿರಾಜಪೇಟೆ ತಾಲೂಕಿನ ಚೇಲಾವರ ಫಾಲ್ಸ್ ಬಳಿಯ ಖಾಸಗಿ ಕೋಟೆಜ್ ವೊಂದರ ಸಮೀಪದಲ್ಲಿರುವ ಶೌಚಾಲಯದ ಗುಂಡಿಗೆ ಬಿದ್ದಿದ್ದ ಕಾಡಾನೆಯೊಂದು ಕೆಲ ಸಮಯ ಹರಸಾಹಸಪಟ್ಟು ಮೇಲೇರಿ ಹೋಗಿದೆ.

ಈ ಸಂಬಂಧ ಪಟ್ರಪಂಡ ಲೀಲಾ ಅಪ್ಪಯ್ಯ ಎಂಬುವವರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಗೆ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದು, ಪಕ್ಕದ ತೋಟದಲ್ಲಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಕಾರ್ಯಾಚರಣೆ ನಡೆಸಿದ್ದಾರೆ.

ವಿರಾಜಪೇಟೆ ವಲಯ ಉಪ ವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಹಾಗೂ ಎಸಿಎಫ್ ಗೋಪಾಲ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಶಿವರಾಂ ಸೇರಿದಂತೆ ವಿರಾಜಪೇಟೆ ಅರಣ್ಯ ವಲಯದ ಆರ್.ಆರ್.ಟಿ, ಈಟಿಎಫ್ ಸಿಬ್ಬಂದಿಗಳು ಹಾಗೂ ಸ್ಥಳೀಯರ ಸಹಾಯದೊಂದಿಗೆ ಕಾರ್ಯಾಚರಣೆ ನಡೆಸಿದ್ದಾರೆ.

✒️ ಸುರೇಶ್ ಪೂಜಾರಿ ಗುಹ್ಯ

Share this article

ಟಾಪ್ ನ್ಯೂಸ್

More News