Breaking News :

ವಿದೇಶದಲ್ಲಿ ಮೃತಪಟ್ಟ ವ್ಯಕ್ತಿಯ ಪಾರ್ಥಿವ ಶರೀರ ಭಾರತಕ್ಕೆ ತರಲು ಸರಕಾರದಿಂದ ನೆರವು 

ವಿದೇಶದಲ್ಲಿ ಮೃತಪಟ್ಟ ವ್ಯಕ್ತಿಯ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಸರಕಾರದಿಂದ ನೆರವು

ಮಡಿಕೇರಿ : ಶಾಸಕ ಪೊನ್ನಣ್ಣ ರವರ ಪ್ರಯತ್ನದಿಂದ, ಅಮೆರಿಕದ ಗಯಾನ ದೇಶದಲ್ಲಿ ನಿಧನರಾದ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮದೆನಾಡು ಗ್ರಾಮದ, ಗಿರೀಶ್ ಪಾಲೆ ಬಾಬು ರವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ರಾಜ್ಯ ಸರ್ಕಾರದಿಂದ ಹಣಕಾಸಿನ ನೆರವು.

ಇತ್ತೀಚೆಗೆ ಅಮೆರಿಕದ ಗಯಾನದಲ್ಲಿ ಅನಾರೋಗ್ಯದಿಂದ ಮೃತಪಟ್ಟ ಗಿರೀಶ್ ರವರ ಮೃತ ದೇಹವನ್ನು ಭಾರತಕ್ಕೆ ತರಲು ಅವರ ಬಡ ಕುಟುಂಬಕ್ಕೆ ಸಾಧ್ಯವಾಗದನ್ನು ಸ್ಥಳೀಯರಿಂದ ಮಾಹಿತಿ ಪಡೆದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ , ಪಾರ್ಥಿವ ಶರೀರವನ್ನು ತಾಯ್ನಾಡಿಗೆ ತರಲು ಸಹಕರಿಸುವಂತೆ ಬಂದ ಮನವಿಗೆ ಕೂಡಲೇ ಸ್ಪಂದಿಸಿ ಸರಕಾರ ಹಾಗೂ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ, ಅದಕ್ಕೆ ತಗಲುವ ವೆಚ್ಚದಲ್ಲಿ ₹ 3,60,000 ವನ್ನು ಸರಕಾರವೇ ಭರಿಸುವ ಆದೇಶವನ್ನು ಕೊಡಿಸಿರುತ್ತಾರೆ.

ಬಡ ಕುಟುಂಬಕ್ಕೆ ನೆರವಾದ ಸರಕಾರ ಹಾಗೂ ಮಾನ್ಯ ಶಾಸಕರಾದ ಎ.ಎಸ್ ಪೊನ್ನಣ್ಣ ರವರಿಗೆ ಗ್ರಾಮಸ್ಥರು ಧನ್ಯವಾದಗಳು ಅರ್ಪಿಸಿದ್ದಾರೆ

Share this article

ಟಾಪ್ ನ್ಯೂಸ್

More News