ಸಂತ ಅನ್ನಮ್ಮ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ವಿದ್ಯಾರ್ಥಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭ.
ವಿರಾಜಪೇಟೆ :ಪಟ್ಟಣದ ಸಂತ ಅನ್ನಮ್ಮ ವಿದ್ಯಾಸಂಸ್ಥೆಯಲ್ಲಿ ಈ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿ ಪದಾಧಿಕಾರಿಗಳು ಆಯ್ಕೆಯಾಗಿದ್ದು ಅದರ ಪ್ರಯುಕ್ತ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶಾಲಾ ಸಭಾಂಗಣದಲ್ಲಿ ಜರುಗಿತು.ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ವ್ಯವಸ್ಥಾಪಕರು ಹಾಗೂ ಸಂತ ಅನ್ನಮ್ಮ ದೇವಾಲಯದ ಪ್ರಧಾನ ಗುರುಗಳಾದ ರೆ. ಫಾ. ಜೇಮ್ಸ್ ಡೊಮಿನಿಕ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಬಳಿಕ ಅವರು ಮಾತನಾಡುತ್ತ ವಿದ್ಯಾರ್ಥಿಗಳು ನಾಯಕತ್ವದ ಗುಣವನ್ನು ತಮ್ಮ ಶಿಕ್ಷಣದ ಹಂತದಿಂದಲೇ ಹೊಂದಿರಬೇಕು. ತಮ್ಮ ವ್ಯಕ್ತಿತ್ವ ವಿಕಸನವನ್ನು ಮಾಡುವುದರ ಮೂಲಕ ಶಾಲೆಗೂ ಪೋಷಕರಿಗೂ ಕೀರ್ತಿಯನ್ನು ತನ್ನಿ ಎಂದು ಶುಭ ಹಾರೈಸಿದರು.ಮತ್ತು ನಾಯಕತ್ವದ ಗುಣಗಳನ್ನು ವಿವರಿಸಿದರು.ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಹಾಗೂ ಪದವಿ ಕಾಲೇಜಿನ ವ್ಯವಸ್ಥಾಪಕರಾದ ರೆ. ಫಾ. ಮದಲೈ ಮುತ್ತು ರವರು ಮಾತನಾಡಿ ವಿದ್ಯಾರ್ಥಿ ನಾಯಕರಿಗೆ ಸೇವಾ ಮನೋಭಾವನೆಯು ಅತೀ ಮುಖ್ಯವಾದುದು. ನಿಸ್ಕಲ್ಮಷ ಸೇವೆಯನ್ನು ಸಮಾಜಕ್ಕೆ ಸಲ್ಲಿಸಬೇಕು.ಅಹಂ ನ್ನು ತೊರೆದು ಸೇವಾ ಮನೋಭಾವನೆಯನ್ನು ಮೂಡಿಸಿಕೊಂಡು ಶಿಸ್ತನ್ನು ಮೈಗೂಡಿಸಿಕೊಳ್ಳಿ ಎಂದು ಕಿವಿಮಾತನ್ನು ಹೇಳಿದರು. ಮತ್ತು ನೂತನ ನಾಯಕರುಗಳಿಗೆ ಶುಭವನ್ನು ಕೋರಿದರು.ಈ ಸಂದರ್ಭದಲ್ಲಿ ನೂತನ ವಿದ್ಯಾರ್ಥಿ ನಾಯಕರುಗಳ ಪದಗ್ರಹಣ ವು ನಡೆಯಿತು.ಶಾಲಾ ನಾಯಕನಾಗಿ ಡೀನ್ ಸಾಲೋ ಡಿಸೋಜಾ, ಶಾಲಾ ನಾಯಕಿಯಾಗಿ ಜನನಿ,ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸನಾ, ಕಾರ್ಯದರ್ಶಿಯಾಗಿ ಮೋನಿಷಾ,ಆರೋಗ್ಯ ಮಂತ್ರಿಯಾಗಿ ಚಹಲ್,ಉಪ ಆರೋಗ್ಯ ಮಂತ್ರಿಯಾಗಿ ಸಾರ ,ಶಿಸ್ತಿನ ಮಂತ್ರಿಯಾಗಿ ಕಿರಣ್,ಉಪ ಶಿಸ್ತಿನ ಮಂತ್ರಿಯಾಗಿ ನಯನ, ಸಾಂಸ್ಕೃತಿಕ ಮಂತ್ರಿಯಾಗಿ ದಿಗಂತ್, ಉಪ ಸಾಂಸ್ಕೃತಿಕ ಮಂತ್ರಿಯಾಗಿ ವಿಮರ್ಶಾ,ಕ್ರೀಡಾ ಮಂತ್ರಿಯಾಗಿ ಅಭಿಜಿತ್, ಉಪ ಕ್ರೀಡಾ ಮಂತ್ರಿಯಾಗಿ ದೀಕ್ಷಿತ್ ರವರಿಗೆ ಅತಿಥಿಗಳು ಬ್ಯಾಡ್ಜ್ ತೊಡಿಸಿ ಅಭಿನಂದಿಸಿದರು. ನೂತನ ಪದಾಧಿಕಾರಿಗಳು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.ಸಂತ ಅನ್ನಮ್ಮ ಪ್ರೌಢ ಶಾಲಾ ಮುಖ್ಯ ಶಿಕ್ಷಕರಾದ ಬೆನ್ನಿ ಜೋಸೆಫ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ವಂದನಾ,ಕನ್ನಡ ವಿಭಾಗದ ಮುಖ್ಯಸ್ಥರಾದ ಸಿಸ್ಟರ್ ರೋಸಿ, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಶಿಕ್ಷಕ ಮುನೀರ್,ಕಾರ್ಯದರ್ಶಿ ಜ್ಯೋತಿ,ಟೀನಾ ಗೋನ್ಸಾಲ್ವೇಸ್,ದಿವ್ಯ ಡೀನ ಸಾಲ್ಡಾನ್ಹಾ,ರವರು ಉಪಸ್ಥಿತರಿದ್ದರು.ಶಿಕ್ಷಕ ಗಂಗಾಧರ್ ನಿರೂಪಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು. ತದನಂತರ ವಿದ್ಯಾರ್ಥಿಗಳಿಂದ ಆಕರ್ಷಕವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.









